ಮುಳುಗುತಜ್ಞ ಈಶ್ವರ್ ಮಲ್ಪೆ ಗಂಗಾವಳಿ ನದಿಯಲ್ಲಿ ಟ್ರಕ್ಕಿನ ಜ್ಯಾಕ್ ಪತ್ತೆ ಮಾಡಿದ ದೃಶ್ಯ ಕೆಮೆರಾದಲ್ಲಿ ಸೆರೆ

ಜ್ಯಾಕ್ ಸಿಕ್ಕ ನಂತರ ಇವತ್ತಿನ ಕಾರ್ಯಾಚರಣೆಯನ್ನ್ನು ಈಶ್ವರ್ ಮಲ್ಪೆ ನಿಲ್ಲಿಸಿರುವುರಾದರೂ ನಾಳೆ ಪುನಃ ಮುಂದುವರಿಸಲಿದ್ದಾರೆ. ನಾಪತ್ತೆಯಾಗಿರುವ ಟ್ರಕ್ ಡ್ರೈವರ್ ಅರ್ಜುನ್, ಸ್ಥಳೀಯರಾಗಿರುವ ಲೋಕೇಶ್ ನಾಯ್ಕ್ ಮತ್ತು ಜಗನ್ನಾಥ ನಾಯ್ಕ್ ಅವರ ದೇಹಗಳನ್ನು ಪತ್ತೆ ಮಾಡುವ ಭರವಸೆಯನ್ನು ಈಶ್ವರ್ ಮೂವರ ಕುಟುಂಬಸ್ಥರಿಗೆ ನೀಡಿದ್ದಾರೆ.

ಮುಳುಗುತಜ್ಞ ಈಶ್ವರ್ ಮಲ್ಪೆ ಗಂಗಾವಳಿ ನದಿಯಲ್ಲಿ ಟ್ರಕ್ಕಿನ ಜ್ಯಾಕ್ ಪತ್ತೆ ಮಾಡಿದ ದೃಶ್ಯ ಕೆಮೆರಾದಲ್ಲಿ ಸೆರೆ
|

Updated on: Aug 13, 2024 | 7:31 PM

ಕಾರವಾರ: ಜಿಲ್ಲೆಯ ಶಿರೂರು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿ 11 ಜನ ಮತ್ತು ಕೇರಳ ಮೂಲದ ಒಂದು ಟ್ರಕ್ ಕಾಣೆಯಾಗಿ ಹೆಚ್ಚುಕಡಿಮೆ ಒಂದು ತಿಂಗಳಾಯಿತು. ಇದುವರೆಗೆ ಕೇವಲ 8 ಜನರ ದೇಹಗಳು ಮಾತ್ರ ಪತ್ತೆಯಾಗಿದ್ದು ಇನ್ನುಳಿದ ಮೂವರ ಶೋಧ ಕಾರ್ಯ ನಿಲ್ಲಿಸಲಾಗಿತ್ತು. ಆದರೆ ಪರಿಣಿತ ಈಜುಗಾರ, ಸ್ಕೂಬಾ ಡೈವರ್ ಈಶ್ವರ್ ಮಲ್ಪೆಯವರು ಇಂದು ಬೆಳಗ್ಗೆ ವಿಶೇಷ ಅನುಮತಿ ಪಡೆದು ನಾಪತ್ತೆಯಾಗಿರುವ ಮೂವರು ಮತ್ತು ಟ್ರಕ್ ಅನ್ನು ಪತ್ತೆ ಮಾಡಲು ಗಂಗಾವಳಿ ನದಿಗಳಿದರು. ಅವರು ನಡೆಸಿದ ಶೋಧ ಕಾರ್ಯಾಚರಣೆಯ ದೃಶ್ಯ ಕೆಮೆರಾದಲ್ಲಿ ಸೆರೆಯಾಗಿದ್ದು ಇಲ್ಲಿ ಅದನ್ನು ನೋಡಬಹುದು. ಈಶ್ವರ್ ಆಕ್ಸಿಜನ್ ಸಿಲಿಂಡರ್ ನೊಂದಿಗೆ ನದಿಯ ತಳಭಾಗಕ್ಕೆ ಹೋಗಿ ಎಷ್ಟೋ ಸಮಯದ ನಂತರ ಟ್ರಕ್ಕಿನ ಹೈಡ್ರಾಲಿಕ್ ಜ್ಯಾಕ್ ನೊಂದಿಗೆ ಮೇಲೆ ಬರುವುದು ಮತ್ತು ತಮ್ಮ ಕಾರ್ಯದಲ್ಲಿ ನಾವೆಗಳೊಂದಿಗೆ ನೆರವಾಗುತ್ತಿರುವ ನೌಕಾ ಸಿಬ್ಬಂದಿಗೆ ಅದನ್ನು ನೀಡುತ್ತಿರುವುದು ಕೆಮೆರಾದಲ್ಲಿ ಸೆರೆಯಾಗಿದೆ. ಟ್ರಕ್ಕಿನ ಮಾಲೀಕ ಮನಾಫ್ ಅದು ತಮ್ಮ ವಾಹನದಲ್ಲಿದ್ದ ಜ್ಯಾಕ್ ಅಂತ ಖಚಿತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶಿರೂರು ಗುಡ್ಡಕುಸಿತ ದುರಂತ: ನಾಪತ್ತೆಯಾಗಿರುವ ಇನ್ನೂ ಮೂವರ ದೇಹಗಳ ಪತ್ತೆಗೆ ಅತ್ಯಾಧನಿಕ ಡ್ರೋನ್ ಬಳಕೆ

Follow us