AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರೂರು ಗುಡ್ಡಕುಸಿತ ದುರಂತ: ನಾಪತ್ತೆಯಾಗಿರುವ ಇನ್ನೂ ಮೂವರ ದೇಹಗಳ ಪತ್ತೆಗೆ ಅತ್ಯಾಧನಿಕ ಡ್ರೋನ್ ಬಳಕೆ

ಶಿರೂರು ಗುಡ್ಡಕುಸಿತ ದುರಂತ: ನಾಪತ್ತೆಯಾಗಿರುವ ಇನ್ನೂ ಮೂವರ ದೇಹಗಳ ಪತ್ತೆಗೆ ಅತ್ಯಾಧನಿಕ ಡ್ರೋನ್ ಬಳಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 25, 2024 | 4:52 PM

Share

ನಾಪತ್ತೆಯಾಗಿದ್ದ ಕೇರಳ ಮೂಲದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ ಯಾಗಿದೆ. ಆದರೆ ಅದನ್ನು ಓಡಿಸುತ್ತಿದ್ದ ಅರ್ಜುನ್ ಹೆಸರಿನ ಚಾಲಕನ ದೇಹ ಪತ್ತೆಯಾಗಿಲ್ಲ. ಟ್ರಕ್ ಅನ್ನು ನೀರಿನಿಂದ ಮೇಲೆತ್ತುವುದು ಸುಲಭದ ಕೆಲಸವಲ್ಲ. ಅದಕ್ಕೆ ಪರಿಣಿತರು ಮತ್ತು ಉಪಕರಣಗಳು ಬೇಕು. ಟ್ರಕ್ ಕೆಸರಲ್ಲ್ಲಿ ಹೂತಿರುವ ಬಗ್ಗೆ ಮಾಹಿತಿ ನಿನ್ನೆ ಲಭ್ಯವಾಗಿತ್ತು.

ಕಾರವಾರ: ಅಂಕೋಲದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತದ ದುರ್ಘಟನೆಯಲ್ಲಿ ಕಣ್ಮರೆಯಾದವರ ಪೈಕಿ ಇನ್ನೂ ಮೂರು ಜನ ಸಿಕ್ಕಿಲ್ಲ. ಉಳಿದ 8 ಜನರ ದೇಹಗಳೆಲ್ಲ ಪಕ್ಕದಲ್ಲಿ ಹರಿಯುವ ಗಂಗಾವಳಿ ನದಿಯಲ್ಲಿ ಸಿಕ್ಕಿರುವುದರಿಂದ ಆ ಮೂವರ ದೇಹಗಳು ಸಹ ನದಿಯಲ್ಲೇ ಇರಬಹುದೆಂಬ ಅನುಮಾನದಿಂದ ಕಾರ್ಯಾಚರಣೆ ನಡೆದಿದೆ. ದೇಹಗಳ ಪತ್ತೆಗಾಗಿ ಇವತ್ತು ದೆಹಲಿಯಿಂದ ತರಿಸಲಾಗಿರುವ ಅತ್ಯಾಧುನಿಕ ಡ್ರೋನ್ ಒಂದನ್ನು ಬಳಸಲಾಗುತ್ತಿದೆ. ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟಲ್ಲಿಜೆಂಟ್ ಅಂಡರ್ ಗ್ರೌಂಡ್ ಬೆರೀಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಎಂದು ಕರೆಸಿಕೊಳ್ಳುವ ಈ ಅಲ್ಟ್ರಾ ಮಾಡರ್ನ್ ಸಾಧನ ಎರಡೂವರೆ ಕಿಮೀ ಎತ್ತರದಲ್ಲಿ ಹಾರುವ ವಸ್ತುಗಳನ್ನು ಮತ್ತು ನೀರಿನಡಿ 20 ಮೀಟರ್ ಆಳದಲ್ಲಿರುವ ವಸ್ತುಗಳ ಪತ್ತೆ ಮಾಡಿ ಅವುಗಳ ಚಿತ್ರಗಳನ್ನು ಸೆರೆಹಿಡಿಯುತ್ತದೆ ಎಂದು ನಮ್ಮ ಕಾರವಾರ ವರದಿಗಾರ ಮಾಹಿತಿ ನೀಡಿದ್ದಾರೆ. ಹೆಚ್ಚಿ ಕಡಿಮೆ ಎರಡು ವಾರಗಳಿಂದ ಸೇನೆ, ಎನ್​ಡಿಅರ್​ಎಫ್, ಎಸ್​​ಡಿಆರ್​ಎಫ್, ಆಗ್ನಿ ಶಾಮಕ ದಳ ಮತ್ತು ಪೊಲೀಸ್ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿರೂರು ಗುಡ್ಡ ಕುಸಿತ: ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ, ತೀವ್ರಗೊಂಡ ಕಾರ್ಯಾಚರಣೆ