ಶಿರೂರು ಗುಡ್ಡ ಕುಸಿತ: ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ, ತೀವ್ರಗೊಂಡ ಕಾರ್ಯಾಚರಣೆ

ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೂರು ಗ್ರಾಮದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಟ್ವೀಟ್ ಮಾಡಿದ್ದು, ‘ಗಂಗಾವಳಿ ನದಿಯಲ್ಲಿ ಟ್ರಕ್​ ಇರೋದು ಖಚಿತವಾಗಿದೆ ಎಂದಿದ್ದಾರೆ.

ಶಿರೂರು ಗುಡ್ಡ ಕುಸಿತ: ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ, ತೀವ್ರಗೊಂಡ ಕಾರ್ಯಾಚರಣೆ
ಶಿರೂರು ಗುಡ್ಡ ಕುಸಿತ: ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 24, 2024 | 5:47 PM

ಉತ್ತರ ಕನ್ನಡ, ಜು.24: ಭಾರೀ ಮಳೆಯಿಂದಾಗಿ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಒಟ್ಟು ಹತ್ತು ಜನರು ಮೃತಪಟ್ಟಿದ್ದು, ಈ ಪೈಕಿ  ಕಾರ್ಯಾಚರಣೆ ಮೂಲಕ ಈವರೆಗೆ ಎಂಟು ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಇನ್ನು ಈ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಈಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿಯಲ್ಲಿರುವುದು ಪತ್ತೆಯಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ದುರಂತ ಸಂಭವಿಸಿದ ಎಂಟು ದಿನಗಳು ಕಳೆದ ಬಳಿಕ ಟ್ರಕ್ ಪತ್ತೆಯಾಗಿದ್ದು, ಕಾರ್ಯಚರಣೆ ತೀವ್ರಗೊಂಡಿದೆ. ಆದ್ರೆ, ಚಾಲಕ ಅರ್ಜುನ್ ಟ್ರಕ್​ನಲ್ಲಿ ಸಿಲುಕಿಕೊಂಡಿದ್ದಾರಾ ಅಥವಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರಾ ಎನ್ನುವುದು ಇನ್ನು ತಿಳಿದುಬಂದಿಲ್ಲ. ಸದ್ಯಕ್ಕೆ ನದಿಯಿಂದ ಟ್ರಕ್​ ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ.

ಈ ಬಗ್ಗೆ ಟ್ವಿಟ್​ ಮಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ

ಸ್ಥಳಕ್ಕೆ ಧಾವಿಸಿದ ಡಿಸಿ ಲಕ್ಷ್ಮೀಪ್ರಿಯಾ ಹಾಗೂ ಎಸ್​ಪಿ ನಾರಾಯಣ

ಇಂದು(ಬುಧವಾರ) ಗಂಗಾವಳಿ ನದಿಯಲ್ಲಿ ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಕಾರ್ಯಾಚರಣೆ ವೇಳೆ ಫೋಕ್ಲೇನ್ ಬಕೆಟ್​ಗೆ ಕಬ್ಬಿಣ ಬಡಿದಿದೆ. ಈ ಹಿನ್ನಲೆ ನದಿಯಲ್ಲಿ ವಾಹನ ಒಂದು ಇರುವುದು ಖಚಿತ ಆಗುತ್ತಿದ್ದಂತೆ, ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಧಾವಿಸಿದ್ದಾರೆ. ಇದೀಗ ಕಾರ್ಯಾಚರಣೆ ತಿವ್ರಗೊಂಡಿದ್ದು, ಆ ವಾಹನ ಲಾರಿನಾ ಎಂಬ ಪ್ರಶ್ನೆ ಮುಡುತ್ತಿದೆ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ ಬೆನ್ನಲ್ಲೇ ಎಚ್ಚೆತ್ತ ಚಿಕ್ಕಮಗಳೂರು ಜಿಲ್ಲಾಡಳಿತ; ಅಪಾಯಕಾರಿ ಸ್ಥಳದಲ್ಲಿದ್ದ ಮರಗಳ ತೆರವು

ನಮಗೆ ಗಾಡಿ ಇರುವುದು ಕಾಣಿಸುತ್ತಿಲ್ಲ-ಶಾಸಕ ಸತೀಶ್ ಸೈಲ್

ಈ ಕುರಿತು ಮಾತನಾಡಿದ ಶಾಸಕ ಸತೀಶ್ ಸೈಲ್, ‘ಲಾರಿ ಇದೆ ಎನ್ನಲಾದ ಸ್ಥಳಕ್ಕೆ ಹೊಗಿ ಬಂದಿದ್ದೇನೆ. ‘ಬೆಟ್ಟನ ಲೈನ್ ಅವರ ಕೊಟ್ಟ ಲ್ಯಾಂಡ್​ನಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ಲಾರಿ ಇದೆ ಎನ್ನಲಾಗುತ್ತಿದೆ. ಆದರೆ, ನಮಗೆ ಗಾಡಿ ಇರುವುದು ಕಾಣಿಸುತ್ತಿಲ್ಲ ಎಂದಿದ್ದಾರೆ.

ಒಂದೆಡೆ ಕೇರಳದಲ್ಲಿ ಅರ್ಜುನ್ ಬದುಕಿ ಬರಲಿ ಎಂದು ಇಡೀ ರಾಜ್ಯವೇ ಪ್ರಾರ್ಥನೆ ಮಾಡುತ್ತಿದೆ. ಇನ್ನು ಜಿಲ್ಲಾಡಳಿತ ಕಾರ್ಯಾಚರಣೆ ನಿಧಾನಗತಿಯಲ್ಲಿ ಮಾಡುತ್ತಿದೆ ಎಂದು ಟ್ರಕ್ ಚಾಲಕ ಅರ್ಜುನ್ ಕುಟುಂಬದ ಸದಸ್ಯರು ಕೋರ್ಟ್​ ಮೆಟ್ಟಿಲೇರಿದರೇ, ಬೆಂಗಳೂರಿನ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಾರ್ಯಾಚರಣೆಯ ವರದಿ ನೀಡುವಂತೆ ಸೂಚಿಸಿತ್ತು. ಹೀಗಾಗಿ ಜಿಲ್ಲಾಡಳಿತ ಮತ್ತಷ್ಟು ಅಲರ್ಟ್​ ಆಗಿದ್ದು, ಶಿರೂರು ಭಾಗದಲ್ಲಿ ಶವ ಶೋಧದ ಜೊತೆ ಅರ್ಜುನ್​ಗಾಗಿ ಶೋಧಕಾರ್ಯಕ್ಕೆ ವೇಗ ನೀಡಲಾಗಿದೆ.

ಇನ್ನು ಜಿಲ್ಲೆಯ ಹಲವು ಭಾಗಗಳಲ್ಲಿ ಗುಡ್ಡ ಕುಸಿಯುವ ಕುರಿತು ಭೂ ವಿಜ್ಞಾನಿಗಳು ವರದಿ ನೀಡಿದ್ದಾರೆ. ಜೊತೆಗೆ ಶಿರೂರಿನಲ್ಲಿ ಮತ್ತೆ ಭೂ ಕುಸಿತವಾಗುವ ಎಚ್ಚರಿಕೆ ನೀಡಲಾಗಿದೆ. ಅದರಂತೆ ಜಿಲ್ಲೆಯ 34 ಜನ ವಸತಿ ಪ್ರದೇಶಗಳಲ್ಲಿ ಭೂ ಕುಸಿತವಾಗುವ ಆತಂಕವಿದೆ. ಜಿಲ್ಲೆಯಲ್ಲಿ ಈವರೆಗೆ ಭೂ ಕುಸಿತದಲ್ಲಿ 39 ಜನರ ಸಾವಾಗಿದೆ.ಈ ಹಿನ್ನಲೆ ಜಿಲ್ಲೆಯ ಜನ ಭೂ ಕುಸಿತದ ಭಯದಲ್ಲಿ ಬಿಸಿ ಕೆಂಡವನ್ನು ಕೈಯಲ್ಲಿ ಹಿಡಿದಂತೆ ಬದುಕುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Wed, 24 July 24