Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ಜೀವ ಭಯದಲ್ಲಿ ದಿಕ್ಕಾಪಾಲಾಗಿ ಓಡಿದ ಜನ, ವಿಡಿಯೋ ಸೆರೆ

ಶಿರೂರು ಗುಡ್ಡ ಕುಸಿತ; ಉಳುವೆರೆ ಗ್ರಾಮದಲ್ಲಿ ಜೀವ ಭಯದಲ್ಲಿ ದಿಕ್ಕಾಪಾಲಾಗಿ ಓಡಿದ ಜನ, ವಿಡಿಯೋ ಸೆರೆ

ಸೂರಜ್​, ಮಹಾವೀರ್​ ಉತ್ತರೆ
| Updated By: ಆಯೇಷಾ ಬಾನು

Updated on:Jul 24, 2024 | 12:29 PM

ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ಭೀಕರ ಗುಡ್ಡ ಕುಸಿತವಾಗಿದ್ದು ಈ ವೇಳೆ ಶಿರೂರಿನ ವಿರುದ್ದ ದಿಕ್ಕಿನಲ್ಲಿರುವ ಉಳುವೆರೆ ಗ್ರಾಮದಲ್ಲಿ ಪ್ರವಾಹ ಸೃಷ್ಠಿಯಾಗಿತ್ತು. ಉಳುವೆರೆ ಗ್ರಾಮಕ್ಕೆ ಪ್ರವಾಹ ಹೊಕ್ಕಿದ ಕೆಲವೇ ನಿಮಿಷದ ಬಳಿಕದ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಕಾರವಾರ, ಜುಲೈ.24: ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಘಟನೆಗೆ ಸಂಬಂಧಿಸಿ ಗುಡ್ಡ ಕುಸಿತ ದುರಂತ ನಡೆದ ಬಳಿಕ ಜನರು ಜೀವ ಭಯದಿಂದ ಓಡುತ್ತಿರುವ ಭೀಕರ ದೃಶ್ಯಾವಳಿಗಳು ಟಿವಿ9ಗೆ ಸಿಕ್ಕಿವೆ. ಜುಲೈ 16ರಂದು ಬೆಳಗ್ಗೆ 8.30-8.45ರ ನಡುವೆ ಅಂಕೋಲಾದ ಶಿರೂರಿನಲ್ಲಿ (Shirur Landslide) ಭೀಕರ ಗುಡ್ಡ ಕುಸಿತವಾಗಿತ್ತು. ಈ ಗುಡ್ಡ ಕುಸಿತದಿಂದ ಶಿರೂರಿನ ವಿರುದ್ದ ದಿಕ್ಕಿನಲ್ಲಿರುವ ಉಳುವೆರೆ ಗ್ರಾಮದಲ್ಲಿ ಸುನಾಮಿ ಮಾದರಿಯಲ್ಲಿ ಪ್ರವಾಹ ಸೃಷ್ಠಿಯಾಗಿತ್ತು. ಪ್ರವಾಹದ ಏಟಿಗೆ ಸುಮಾರು 4-5 ಮನೆಗಳು ಪುಡಿ ಪುಡಿಯಾಗಿ ಹಲವು ಮನೆಗಳಿಗೆ ಹಾನಿಯಾಗಿತ್ತು.

ಈ ಘಟನೆಯಲ್ಲಿ ಸೆಣ್ಣಿ ಹನುಮಂತ ಗೌಡ (62) ಎಂಬ ವೃದ್ಧೆ ಕೂಡಾ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದರು. ಕೇವಲ 5-10 ನಿಮಿಷದ ಅಂತರದಲ್ಲಿ ಉಳುವೆರೆ ಗ್ರಾಮವೇ ಅರ್ಧಭಾಗ ತೀವ್ರ ಹಾನಿಗೀಡಾಗಿತ್ತು. ಉಳುವೆರೆ ಗ್ರಾಮಕ್ಕೆ ಪ್ರವಾಹ ಹೊಕ್ಕಿದ ಕೆಲವೇ ನಿಮಿಷದ ಬಳಿಕದ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಜನರು ಜೀವ ಭಯದಿಂದ ಓಡುತ್ತಿರುವ ವೇಳೆ ನೀರು ರಸ್ತೆ, ಮನೆಗಳತ್ತ ಹೊಕ್ಕಿತ್ತು. ಉಳುವೆರೆ ಗ್ರಾಮದಲ್ಲಿ ಕೆಲವರು ದೂರದಿಂದಲೇ ನದಿ ನೀರು ಏಕಾಏಕಿ ಹೊಕ್ಕಿದ್ದು ಕಂಡು ಓಡಿಹೋಗಿದ್ರು. ಜೀವ ಭಯದಲ್ಲಿ ಇತರರ ಬಳಿ ಕೂಡಾ ಓಡಿ, ಓಡಿ ಅಂತಾ ಹೇಳ್ತಿರೋದು, ನದಿ ನೀರು ಮೇಲೆ ಬಂದಿರೋ ದೃಶ್ಯ ಸೆರೆಯಾಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jul 24, 2024 12:28 PM