AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈದುನ ದಿನಕರ್ ಜೊತೆ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಮೈದುನ ದಿನಕರ್ ಜೊತೆ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2024 | 11:12 AM

Share

ನಟ ದರ್ಶನ್ ಜೈಲು ಸೇರಿ ಒಂದೂವರೆ ತಿಂಗಳು ಕಳೆದಿದೆ. ಅವರನ್ನು ನೋಡಲು ಪ್ರತಿದಿನ ಜೈಲಿಗೆ ಜನ ಬರುತ್ತಿದ್ದಾರೆ. ಕೆಲವರಿಗೆ ಅವರನ್ನು ಕಂಡು ಮಾತಾಡುವ ಅವಕಾಶ ಸಿಗುತ್ತದೆ, ಕೆವರಿಗೆ ಸಿಗಲ್ಲ. ನಿನ್ನೆ ಬಂದಿದ್ದ ನಿರ್ದೇಶಕ, ಸಂಗೀತ ನಿರ್ದೇಶಕ ಮತ್ತು ಕಮೆಡಿಯನ್ ಸಾಧು ಕೋಕಿಲಗೆ ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 2 ಆಗಿ ಜೈಲು ಸೇರಿರುವ ಚಿತ್ರನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಇಂದು ತಮ್ಮ ಮೈದುನ ದಿನಕರ್ ಜೊತೆ ನಗರದ ಸದಾಶಿವನಗರದಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದರು. ಅವರಿಬ್ಬರು ಕಾರಿಂದ ಇಳಿದು ಶಿವಕುಮಾರ್ ಮನೆ ಪ್ರವೇಶಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ದರ್ಶನ್ ನ್ಯಾಯಾಂಗ ಕಸ್ಟಡಿಯನ್ನು ನ್ಯಾಯಾಲಯವು ಆಗಸ್ಟ್ 1 ರವರೆಗೆ ವಿಸ್ತರಿಸಿದೆ. ಅವರೊಂದಿಗೆ ನಗರದ ಕೇಂದ್ರೀಯ ಕಾರಾಗೃಹದಲ್ಲಿರುವ ಇತರ 12 ಆರೋಪಿಗಳ ನ್ಯಾಯಾಗ ಕಸ್ಟಡಿಯನ್ನು ಸಹ ಅದೇ ತಾರೀಖಿನವರೆಗೆ ವಿಸ್ತರಿಸಲಾಗಿದೆ. ವಿಜಯಲಕ್ಷ್ಮಿ ಮತ್ತು ದಿನಕರ್ ಉಪ ಮುಖ್ಯಮಂತ್ರಿಯ ಜೊತೆ ಏನು ಮಾತಾಡಲಿದ್ದಾರೆ ಅನ್ನೋದು ಕುತೂಹಲಕಾರಿ ಸಂಗತಿಯಾಗಿದೆ. ನಮ್ಮ ಬೆಂಗಳೂರು ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ ವಿಜಯಲಕ್ಷ್ಮಿ ಮತ್ತು ದಿನಕರ್ ಅವರು ಆಗಮಿಸಿದ ಸ್ವಲ್ಲ ಹೊತ್ತಿನಲ್ಲಿ ನಿರ್ದೇಶಕ ಪ್ರೇಮ್ ಸಹ ಶಿವಕುಮಾರ ಮನೆಗೆ ಬಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆಯನ್ನು ಮಾಧ್ಯಮಗಳಿಗಾಗಿ ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಜಿ ಪರಮೇಶ್ವರ್