ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆಯನ್ನು ಮಾಧ್ಯಮಗಳಿಗಾಗಿ ಫಾಸ್ಟ್ ಫಾರ್ವರ್ಡ್ ಮಾಡಲಾಗಲ್ಲ: ಜಿ ಪರಮೇಶ್ವರ್
ಮುಖ್ಯಮಂತ್ರಿ ಬದಲಾವಣೆ ಮತ್ತು ಹೆಚ್ಚುವರಿ ಉಪ ಮಂತ್ರಿಗಳ ಬೇಡಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪರಮೇಶ್ವರ್, ಇತ್ತೀಚಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯ ಜೊತೆ ದೆಹಲಿಗೆ ತಾನು ಹೋಗಿದ್ದಾಗ ಹೈಕಮಾಂಡ್ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ, ಅವರು ಸರ್ಕಾರದ ಆಡಳಿತವನ್ನು ಮೆಚ್ಚಿ ಶಹಬ್ಬಾಸ್ ಗಿರಿ ನೀಡಿದರು ಎಂದು ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದಾಗ ತಮ್ಮ ಘನತೆಗೆ ತಕ್ಕುದಲ್ಲದ ಪ್ರತಿಕ್ರಿಯೆ ನೀಡಿದರು. ಕೊಲೆ ನಡೆದು ಒಂದು ತಿಂಗಳಾಯ್ತಲ್ಲ ಸರ್ ಅಂತ ಮಾಧ್ಯಮದವರು ಕೇಳಿದಾಗ ಗೃಹ ಸಚಿವ ಅದಕ್ಕೇನು ಮಾಡಬೇಕು? ಅಂತ ಕೇಳುತ್ತಾರೆ. ಮಾಧ್ಯಮದವರು ಕೇಳಿದರೂಂತ ಪ್ರಕರಣವನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗುತ್ತಾ? ಕೊಲೆಗೆ ಸಂಬಂಧಿಸಿದಂತೆ ಅರೋಪಿಗಳನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿದೆ, ತನಿಖಾಧಿಕಾರಿಗಳಿಂದ ಸಾಕ್ಷ್ಯ, ಪುರಾವೆ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಈ ಪ್ರಕ್ರಿಯೆಗೆ ಸಮಯ ಹಿಡಿಯುತ್ತದೆ, ಅದೆಲ್ಲ ಮುಗಿದ ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಲಾಗುತ್ತದೆ ಎಂದು ಪರಮೇಶ್ವರ್ ಹೇಳಿದರು. ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ ಗೃಹ ಸಚಿವ, ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮರುಪರೀಕ್ಷೆ ನಡೆಸಲಾಗಿದ್ದು ನೇಮಕಾತಿ ಆದೇಶಗಳನ್ನು ಜಾರಿ ಮಾಡುವ ಕೆಲಸ ಇಷ್ಟರಲ್ಲೇ ಆರಂಭವಾಗಲಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಇನ್ಮುಂದೆ ದಾಖಲಾಗುವ ಕೇಸ್ಗಳಿಗೆ ಹೊಸ ಕಾನೂನು ಅನ್ವಯ ಆಗಲಿದೆ -ಗೃಹಸಚಿವ ಡಾ.ಪರಮೇಶ್ವರ್