ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ, ಮುಂಬೈಯಲ್ಲಿ ಕುಂಭದ್ರೋಣ

ಮಹಾರಾಷ್ಟ್ರದಲ್ಲೂ ಭಾರೀ ಮಳೆ, ಬಂದರು ನಗರ ರತ್ನಗಿರಿ ಸಂಪೂರ್ಣವಾಗಿ ಜಲಾವೃತ, ಮುಂಬೈಯಲ್ಲಿ ಕುಂಭದ್ರೋಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 08, 2024 | 1:50 PM

ಮಹಾರಾಷ್ಟ್ರದ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ ಕೊಂಕಣ ಪ್ರದೇಶದಲ್ಲಂತೂ ಮಳೆಯ ಆರ್ಭಟ ಹೆದರಿಕೆ ಹುಟ್ಟಿಸುವಂತಿದೆ. ಮಹಾರಾಷ್ಟ್ರ ಮತ್ತು ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಗರದಲ್ಲೂ ಭಾರಿ ಮಳೆಯಿಂದ ಹಾಹಾಕಾರ ಸೃಷ್ಟಿಯಾಗಿದೆ. ಲೋಕಲ್ ಮತ್ತು ಇತರ ರೇಲ್ವೇ ಟ್ರ್ಯಾಕ್ ಗಳು ಜಲಾವೃತಗೊಂಡಿರುವುದರಿಂದ ರೈಲು ಸಂಚಾರ ಪ್ರಭಾವಕ್ಕೊಳಗಾಗಿದೆ.

ರತ್ನಗಿರಿ: ಮಹಾರಾಷ್ಟ್ರದ ರತ್ನಗಿರಿ ಒಂದು ಜಿಲ್ಲಾ ಬಂದರು ಕೇಂದ್ರ ಮತ್ತು ಅಲ್ಫೋನ್ಸೋ ತಳಿ ಮಾವಿನ ಹಣ್ಣುಗಳಿಗೆ ವಿಶ್ವಪ್ರಸಿದ್ಧ. ನಗರದ ಇತಿಹಾಸವನ್ನು ಕೆದಕುವುದಾದರೆ ಇದು ಲೋಕಮಾನ್ಯ ತಿಲಕರವರ ಜನ್ಮಸ್ಥಳ ಹಾಗೂ ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರ ಕರ್ಮಭೂಮಿ. ಓಕೆ, ಸುಮಾರು ಮೂರೂವರೆ ಲಕ್ಷ ಜನಸಂಖ್ಯೆಯ ರತ್ನಗಿರಿ ನಗರವು ಈಗ ಬೇರೆ ಕಾರಣಗಳಿಗೆ ಸುದ್ದಿಯಲ್ಲಿದೆ. ಮೊಬೈಲ್ ಫೋನಲ್ಲಿ ಸೆರೆ ಹಿಡಿದಿರುವ ಈ ವಿಡಿಯೋವನ್ನು ನೋಡಿ, ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗೀ ಪೂರ್ತಿ ನಗರವೇ ಜಲಾಲಾವೃತಗೊಂಡು ಒಂದು ದ್ವೀಪದಂತೆ ಗೋಚರಿಸುತ್ತಿದೆ. ಕೆಲವು ಭಾಗಗಳಲ್ಲಿ ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಶೆಡ್ ಮತ್ತು ಗ್ಯಾರೇಜುಗಳ ಕೇವಲ ಛಾವಣಿ ಮಾತ್ರ ಕಾಣಿಸುತ್ತಿದೆ. ಅಂದಹಾಗೆ ಮಳೆ ಸುರಿಯುವುದೇನೂ ನಿಂತಿಲ್ಲ. ನಗರದ ನಿವಾಸಿಗಳ ಬವಣೆಯನ್ನು ಯೋಚಿಸಿದರೆ ಗಾಬರಿಯಾಗುತ್ತದೆ. ಯಾಕೆಂದರೆ ಅವರು ಯಾವುದಕ್ಕೂ ಹೊರಹೋಗಲಾರರು. ಅಕ್ಕಿ, ದಿನಸಿ, ಚಹಾಪುಡಿ-ಹಾಲು ಮೊದಲಾದ ಅಗತ್ಯ ವಸ್ತುಗಳನ್ನು ತಂದುಕೊಳ್ಳುವುದು ಸಾಧ್ಯವಿಲ್ಲ. ಜಿಲ್ಲಾಡಳಿತವೇ ಬೋಟುಗಳ ಮೂಲಕ ಅಗತ್ಯ ವಸ್ತುಗಳನ್ನು ಮನೆ ಮನೆ ತಲುಪಿಸಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮುಂಬೈನಲ್ಲಿ ಭಾರೀ ಮಳೆ: ಮಹಾರಾಷ್ಟ್ರದ ರಾಯಘಡ, ರತ್ನಗಿರಿ, ಸತಾರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್