ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುನೊಬ್ಬನ ಹುಚ್ಚಾಟ, ಮಳೆಯಲ್ಲಿ ವಾಹನ ಸವಾರರಿಗೆ ತೊಂದರೆ

ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುನೊಬ್ಬನ ಹುಚ್ಚಾಟ, ಮಳೆಯಲ್ಲಿ ವಾಹನ ಸವಾರರಿಗೆ ತೊಂದರೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 08, 2024 | 12:17 PM

ಸಮಸ್ಯೆ ಕುಡುಕನೊಬ್ಬನಿಂದ ಮಾತ್ರ ಅಲ್ಲ, ಅವನ ಜೊತೆ ಸ್ನೇಹಿತರ ಗುಂಪಿನಿಂದಲೂ ಇದೆ. ಅವರು ರಸ್ತೆಯ ಪಕ್ಕ ನಿಂತು ಇಲ್ಲವೇ ತಮ್ಮ ವಾಹನದಲ್ಲಿ ಕುಳಿತು ಕುಡುಕನನ್ನು ಚಪ್ಪಾಳೆ ತಟ್ಟುತ್ತಾ ಶಿಳ್ಳೆ ಹಾಕುತ್ತಾ ಹುರಿದುಂಬಿಸುತ್ತಿದ್ದಾರೆ. ಕುಡುಕನ ಸಹ್ಯವಲ್ಲದ ಚೇಷ್ಟೆಗಳಲ್ಲಿ ಅವರು ಭಾಗಿದಾರರು. ಅಪಾಯಕಾರಿಯಾಗಿ ರಸ್ತೆಯಲ್ಲಿ ಕುಣಿದು ಬೇರೆಯವರಿಗೆ ತೊಂದರೆ ನೀಡುತ್ತಿರುವವನನ್ನು ಎಳೆದು ತಮ್ಮ ವಾಹನದಲ್ಲಿ ಕೂರಿಸುವ ಕೆಲಸ ಮಾಡದಿರುವುದು ಖಂಡನೀಯ.

ಬೆಳಗಾವಿ: ಬೆಳಗಾವಿ ಮತ್ತು ಗೋವಾ ಗಡಿಯ ರಸ್ತೆ ಮೂಲಕ ಹಾದು ಹೋಗುತ್ತಿರುವ ವಾಹನ ಸವಾರರು ಈ ತಲೆತಿರುಕ ಕುಡುಕನಿಗೆ ಬುದ್ಧಿವಾದ ಹೇಳುವ ಬದಲು ನಾಲ್ಕು ತದುಕಿದ್ದರೆ ಅವರ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿಲಿಲ್ಲ. ಅವನ ಹುಚ್ಚಾಟ ನೋಡಿ ಮಾರಾಯ್ರೇ. ಪ್ರಾಯಶಃ ಗೋವಾದಲ್ಲಿ ಮದ್ಯ ಅಗ್ಗ ದರಕ್ಕೆ ಸಿಗುವ ಕಾರಣ ಕಂಠಮಟ್ಟ ಕುಡಿದು ಮತ್ತೇರಿಸಿಕೊಂಡು ಬ್ಯೂಸಿ ರಸ್ತೆಯಲ್ಲಿ ಕುಣಿಯುವುದರ ಜೊತೆ ಬಹುಪಾತ್ರಾಭಿನಯ ಮಾಡುತ್ತಿದ್ದಾನೆ! ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ ಮತ್ತು ಮಳೆ ಶುರುವಾಗುವ ಮೊದಲು ಈ ಪ್ರದೇಶದಲ್ಲಿ ಮಂಜು ಸುರಿಯುತ್ತಿತ್ತಂತೆ. ರೋಮ್ಯಾಂಟಿಕ್ ಆಗಿದ್ದ ವಾತಾವರಣ ನೋಡಿ ಕುಡುಕನಿಗೆ ಕುಣಿಯುವ ಮೂಡ್ ಬಂದಿರಬಹುದು. ಕುಣಿತವಲ್ಲದೆ ಅವನು ಯಕ್ಷಗಾನ ಕಲಾವಿದರ ಹಾಗೆ ಕಣ್ಣುಹಿಗ್ಗಿಸಿ ಪಾತ್ರಾಭಿನಯ ಮಾಡುತ್ತಾನೆ ನಂತರ ಅವನ ಎಡಬಲದಿಂದ ಬರುವ ವಾಹನಗಳನ್ನು ನೋಡಿ ಟ್ರಾಫಿಕ್ ಪೊಲೀಸ್ ನಂತೆ ಸಿಗ್ನಲ್ ಗಳನ್ನು ನೀಡುತ್ತಾನೆ. ನೋಡುಗರಿಗೆ ಅವನು ಮನರಂಜನೆ ಒದಗಿಸುತ್ತರುವುದು ನಿಜವಾದರೂ ಇಥ ಅಪಾಯಕಾರಿ ಮನರಂಜನೆ ಸಾಧುವಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನೊಬ್ಬ ದರ್ಶನ್ ರನ್ನು ನೋಡಲೇಬೇಕೆಂದು ಹಠ ಸಾಧಿಸಿದ!