Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಥಳಿತ

ಕಾರವಾರ: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು ಮುಂದಾದವರಿಗೆ ಥಳಿತ

ಸೂರಜ್​, ಮಹಾವೀರ್​ ಉತ್ತರೆ
| Updated By: ವಿವೇಕ ಬಿರಾದಾರ

Updated on: Jul 08, 2024 | 2:36 PM

ಕುಡಿದ ಮತ್ತಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಠಾಗೋರ ಸಮುದ್ರದಲ್ಲಿ ಇಳಿಯಲು ಮುಂದಾದವರಿಗೆ ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿ ಥಳಿಸಿ ಬುದ್ದಿವಾದ ಹೇಳಿದ್ದಾರೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಯಾರಿಗೂ ಸಮುದ್ರಕ್ಕಿಳಿಯಲು ಕೊಡುತ್ತಿಲ್ಲ.

ಉತ್ತರ ಕನ್ನಡ, ಜುಲೈ 08: ಕುಡಿದ ಮತ್ತಿನಲ್ಲಿ ಸಮುದ್ರಕ್ಕಿಳಿಯಲು (Sea) ಮುಂದಾದವರಿಗೆ ಲೈಫ್ ಗಾರ್ಡ್ (Life Gard) ಹಾಗೂ ಪೊಲೀಸ್ (Police) ಸಿಬ್ಬಂದಿಯಿಂದ ಥಳಿಸಿದ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಕಾರವಾರದ (Karwar) ಠಾಗೋರ ಕಡಲ (Tagore Beach) ತೀರದಲ್ಲಿ ನಡೆದಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಯಾರಿಗೂ ಸಮುದ್ರಕ್ಕಿಳಿಯಲು ಕೊಡುತ್ತಿಲ್ಲ. ಆದರೆ, ಬೆಳಂಬೆಳಿಗ್ಗೆ ಕುಡಿದು ಸಮುದ್ರಕ್ಕಿಳಿಯಲು ಇಬ್ಬರು ಇಳಿದರು. ಲೈಫ್ ಗಾರ್ಡ್ ಎಷ್ಟೆ ಕೂಗಿದರೂ ಕೆಳಿಸಿಕೊಳ್ಳಲಿಲ್ಲ. ಸಮುದ್ರಕ್ಕಿಳಿಯಲು ಮುಂದಾದವರನ್ನು ದಡಕ್ಕೆ ಕರೆತಂದು ಲೈಫ್ ಗಾರ್ಡ್ ಹಾಗೂ ಪೊಲೀಸ್ ಸಿಬ್ಬಂದಿ ಥಳಿಸಿ ಬುದ್ದಿ ಹೇಳಿದರು. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ ಸಡನ್ ಆಗಿ ಒಳಗೆ ಎಳೆದುಕೊಳ್ಳುವ ಸಾಧ್ಯತೆ ಇದೆ. ಮುಂಜಾಗೃತ ಕ್ರಮವಾಗಿ ಕಡಲ ತೀರದಲ್ಲೂ ಮೀನುಗಾರಿಕೆಗೆ ನಿಷೇಧ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ನೀರಿನ ನಡುಗಡ್ಡೆಗಳಾದ ಚೆಂಡಿಯಾ ಗ್ರಾಮದ ಮನೆಗಳು