ಶಿರೂರು ಗುಡ್ಡ ಕುಸಿತ ಬೆನ್ನಲ್ಲೇ ಎಚ್ಚೆತ್ತ ಚಿಕ್ಕಮಗಳೂರು ಜಿಲ್ಲಾಡಳಿತ; ಅಪಾಯಕಾರಿ ಸ್ಥಳದಲ್ಲಿದ್ದ ಮರಗಳ ತೆರವು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡಕುಸಿತದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನಲೆ ಎಚ್ಚೆತ್ತ ಚಿಕ್ಕಮಗಳೂರು ಜಿಲ್ಲಾಡಳಿತ, ಮುಂಜಾಗೃತ ಕ್ರಮವಾಗಿ ಇದೀಗ ರಸ್ತೆ ಬದಿಯ ಗುಡ್ಡ ಕುಸಿತದ ಸ್ಥಳದಲ್ಲಿನ ಮರಗಳನ್ನು ತೆರವು ಮಾಡಲು ಮುಂದಾಗಿದೆ.
ಚಿಕ್ಕಮಗಳೂರು, ಜು.24: ಅಂಕೋಲಾ ತಾಲೂಕಿನ ಶಿರೂರು ಬಳಿಯ ಹೆದ್ದಾರಿ ಹಾಗೂ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದಿದ್ದ ಸಾಲು ಸಾಲು ಗುಡ್ಡ ಕುಸಿತ ಪ್ರಕರಣಗಳ ಬೆನ್ನಲ್ಲೇ ಎಚ್ಚೆತ್ತ ಚಿಕ್ಕಮಗಳೂರು(Chikkamagaluru) ಜಿಲ್ಲಾಡಳಿತ. ಇದೀಗ ಗುಡ್ಡ ಕುಸಿತದ ಸ್ಥಳದಲ್ಲಿದ್ದ ಮರಗಳನ್ನು ತೆರವು ಮಾಡುತ್ತಿದೆ. ರಸ್ತೆ ಬದಿ ಕುಸಿಯುವ ಸ್ಥಿತಿಯಲ್ಲಿದ್ದ ಗುಡ್ಡದ ಮೇಲಿದ್ದ ಮರಗಳನ್ನು ಮುಂಜಾಗೃತ ಕ್ರಮವಾಗಿ ತೆರವು ಮಾಡಲಾಗುತ್ತಿದೆ.
ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಮರಗಳ ತೆರವು
ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ಕಿಮೀ ವರೆಗೂ ಗುಡ್ಡ ಕುಸಿದಿತ್ತು. ಈ ವೇಳೆ ರಸ್ತೆಗೆ ಅಡ್ಡಲಾಗಿ ಗುಡ್ಡದ ಮಣ್ಣು, ಮರಗಳು ಬಿಳುತ್ತಿದ್ದವು. ಈ ಕುರಿತು ಟಿವಿ9 ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಎಸ್ಪಿ ವಿಕ್ರಂ ಆಮ್ಟೆ ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದು, ಮುಂಜಾಗ್ರತಾ ಕ್ರಮವಾಗಿ ಮರಗಳನ್ನು ತೆರವು ಮಾಡಲಾಗುತ್ತಿದೆ. ಜೊತೆಗೆ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮಣ್ಣನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ.
ಇದನ್ನೂ ಓದಿ:ಶಿರೂರು ಗುಡ್ಡಕುಸಿತ ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ನಡೆಯುತ್ತಿಲ್ಲ: ಅಶ್ರಫ್, ಕೇರಳ ಶಾಸಕ
ಭಾರೀ ಮಳೆಗೆ ನೋಡ ನೋಡ್ತಿದ್ದಂತೆ ರಸ್ತೆಗೆ ಉರುಳಿದ ಬೃಹತ್ ಮರ
ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯ ಅವಾಂತರ ಕಡಿಮೆ ಆಗುತ್ತಿಲ್ಲ. ನೋಡ ನೋಡುತ್ತಿದ್ದಂತೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ಚಾಲಕ ಸೇರಿದಂತೆ ಮೂವರು ಜೀವ ಉಳಿಸಿಕೊಂಡ ಘಟನೆ ಚಂದ್ರದ್ರೋಣ ಪರ್ವತದ ದತ್ತಪೀಠ ರಸ್ತೆಯಲ್ಲಿ ನಡೆದಿದೆ. ಬಿರುಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಮರಗಳು ಬಿಳುತ್ತಿದೆ. ಇನ್ನು ಮರ ಬಿಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ