ಶಿರೂರು ಗುಡ್ಡಕುಸಿತ; ಜಿಲ್ಲಾ ಉಸ್ತುವಾರಿ ಸಚಿವನ ಸಮಕ್ಷಮ ತೆರವು ಕಾರ್ಯಾಚರಣೆ ನಡೆದಿದೆ: ಶಿವಕುಮಾರ್

ಶಿರೂರು ಗುಡ್ಡಕುಸಿತ; ಜಿಲ್ಲಾ ಉಸ್ತುವಾರಿ ಸಚಿವನ ಸಮಕ್ಷಮ ತೆರವು ಕಾರ್ಯಾಚರಣೆ ನಡೆದಿದೆ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 20, 2024 | 2:51 PM

ಶಿರೂರು ಗುಡ್ಡ ಕುಸಿತ ನಡೆದಿರುವ ಸ್ಥಳದಲ್ಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಶಾಸಕ ಸತೀಸ್ ಸೈಲ್ ಹಾಜರಿದ್ದು ಮಣ್ಣು ತೆರವು ಕಾರ್ಯಚರಣೆಯನ್ನು ಗಮನಿಸುತ್ತಿದ್ದಾರೆಂದು ಹೇಳುವ ಶಿವಕುಮಾರ್ ಅವರಿಗೆ ಶಾಸಕ ಮತ್ತು ಮಂತ್ರಿ ನಡುವೆ ವಾಗ್ವದ ನಡೆದಿರೋದು ಮತ್ತು ಸೈಲ್ ದುರ್ದಾನ ತೆಗೆದುಕೊಂಡವರ ಹಾಗೆ ಅಲ್ಲಿಂದ ವಾಪಸ್ಸು ಹೋಗಿದ್ದು ಗೊತ್ತಿದ್ದಂತಿಲ್ಲ.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ನಂತರ ಮುಂಜಾಗ್ರತಾ ಕ್ರಮವಾಗಿ ನದಿ ಮತ್ತು ಹೊಳೆ ಪಕ್ಕ ಇರುವ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವ ಕೆಲಸ ಜಾರಿಯಲ್ಲಿದೆ ಎಂದು ಹೇಳಿದರು. ಕೇರಳದ ಡ್ರೈವರ್​ನೊಬ್ಬ ತನ್ನ ವಾಹನ ಸಮೇತ ಮಣ್ಣಿನಡಿ ಸಿಲುಕಿಕೊಂಡಿದ್ದಾನೆ. ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಅದರೆ, ಅವನು ಮಣ್ಣಿನಡಿ ಸಿಲುಕಿ 80-90ಗಂಟೆ ಕಳೆದಿರುವುದರಿಂದ ಏನನ್ನೂ ಹೇಳಲಾಗದು ಎಂದು ಡಿಸಿಎಂ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಸ್ಥಳೀಯ ಶಾಸಕ ಸತೀಶ್ ಸೈಲ್ ಸ್ಥಳದ್ಲಲೇ ಇದ್ದು ಮಣ್ಣು ತೆರವು ಕಾರ್ಯಾಚರನಣೆಯನ್ನು ವೀಕ್ಷಿಸುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು. ನಂತರ ರೈತರ ಹಿತರಕ್ಷಣೆಯ ಬಗ್ಗೆ ಮಾತಾಡಿದ ಶಿವಕುಮಾರ್ ಅವರಿಗೆ ಸವಲತ್ತುಗಳನ್ನು ಒದಗಿಸುವುದರಲ್ಲಿ ಯಾವುದೇ ರಾಜಿಯಿಲ್ಲ, ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಆದಷ್ಟು ಬೇಗ ಚಾಲನೆ ನೀಡಲಾಗುವುದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Assembly Session; ಅವರ ಮಾತು ಸಹನೆಯಿಂದ ಕೇಳಿದೆವು, ಅದರೆ ನಮ್ಮ ಮಾತು ಅವರು ಕೇಳಲಿಲ್ಲ: ಡಿಕೆ ಶಿವಕುಮಾರ್