ಇನ್ನೆರಡು ತಿಂಗಳಲ್ಲಿ ಸಿದ್ಧವಾಗಲಿದೆ ಲೀಲಾವತಿ ಸ್ಮಾರಕ: ಮಾಹಿತಿ ನೀಡಿದ ವಿನೋದ್ ರಾಜ್​

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ನಿಧನರಾದರು. ಆ ಬಳಿಕ ಅವರ ಸ್ಮಾರಕ ನಿರ್ಮಾಣದ ಕೆಲಸವನ್ನು ಪುತ್ರ ವಿನೋದ್​ ರಾಜ್​ ಅವರು ಕೈಗೆತ್ತಿಕೊಂಡಿದ್ದರು. ಅದರ ಕಾರ್ಯ ಈಗ ಎಲ್ಲಿಯವರೆಗೆ ಬಂದಿದೆ ಎಂಬ ಬಗ್ಗೆ ವಿನೋದ್​ ರಾಜ್​ ಅವರು ಮಾಹಿತಿ ನೀಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಇನ್ನೆರಡು ತಿಂಗಳಲ್ಲಿ ಸಿದ್ಧವಾಗಲಿದೆ ಲೀಲಾವತಿ ಸ್ಮಾರಕ: ಮಾಹಿತಿ ನೀಡಿದ ವಿನೋದ್ ರಾಜ್​
|

Updated on: Aug 13, 2024 | 10:51 PM

ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಮಾಡಲಾಗುತ್ತಿದೆ. ಈ ಪ್ರಯುಕ್ತ ಕಲಾವಿದರ ಸಂಘದ ಕಟ್ಟಡಕ್ಕೆ ಬಂದ ವಿನೋದ್​ ರಾಜ್​ ಅವರು ಒಂದಷ್ಟು ಮಾಹಿತಿ ಹಂಚಿಕೊಂಡರು. ‘ನನಗೂ ಸಿಕ್ಕಾಪಟ್ಟೆ ಕೆಲಸ ಇದೆ. ಅಮ್ಮಾವ್ರ ಸ್ಮಾರಕದ ಕೆಲಸ ಹೆಚ್ಚು-ಕಡಿಮೆ ಮುಕ್ತಾಯದ ಹಂತವನ್ನು ತಲುಪಿದೆ. ಅದು ನನಗೆ ದೊಡ್ಡ ಸವಾಲು. ಸರ್ಕಾರದವರು ಕೇಳಿದಾಗ ಅಮ್ಮನ ಸ್ಮಾರಕವನ್ನು ನಾನೇ ಮಾಡುತ್ತೇನೆ ಅಂತ ಕೇಳಿಬಿಟ್ಟೆ. ಸರ್ಕಾರಕ್ಕೆ ಸವಾಲು ಹಾಕುವಷ್ಟು ಯೋಗ್ಯತೆ, ಅರ್ಹತೆ ನನಗೆ ಇಲ್ಲ. ದೊಡ್ಡ ಮನಸ್ಸು ಮಾಡಿ ಮುಖ್ಯಮಂತ್ರಿಗಳು ಕೇಳಿದ್ದರು. ಜನಗಳಿಗೆ ನಾವು ಹೊರೆಯಾಗಿ ಇರಬಾರದು. ತಾಯಿ ತೋಟ ಮಾಡಿದ್ದಾರೆ. ಅಲ್ಲಿ ನಮ್ಮ ಯೋಗ್ಯತೆ ಅನುಸಾರ ಏನು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ. ನನಗೆ ಇತ್ತೀಚೆಗೆ ಸರ್ಜರಿ ಆಯಿತು. ಇನ್ನು ಎರಡೂವರೆ ತಿಂಗಳಲ್ಲಿ ಸ್ಮಾರಕ ಸಿದ್ಧವಾಗುತ್ತದೆ’ ಎಂದು ವಿನೋದ್ ರಾಜ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us