‘ಈ ಸ್ಥಿತಿಯಲ್ಲಿ ನಾನು ನೋಡಬೇಕಿತ್ತಾ’: ದರ್ಶನ್ ಬಗ್ಗೆ ವಿನೋದ್ ರಾಜ್ ಮರುಕ
ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬಂದಿರುವ ವಿನೋದ್ ರಾಜ್ ಬಹಳ ನೋವಿನೊಂದಿಗೆ ಮಾತನಾಡಿದ್ದಾರೆ. ‘ನೋವು ಮತ್ತು ಕಣ್ಣೀರು ಬಿಟ್ಟರೆ ನನಗೆ ಇನ್ನೇನೂ ಗೊತ್ತಾಗುತ್ತಿಲ್ಲ. ಇದು ಒಬ್ಬರ ಕಣ್ಣೀರು ಅಲ್ಲ’ ಎಂದ ಅವರು ಹೇಳಿದ್ದಾರೆ. ಆದಷ್ಟು ಬೇಗ ದರ್ಶನ್ ಅವರು ಈ ಪ್ರಕರಣದಿಂದ ಹೊರಬಂದು ತಲೆ ಎತ್ತಿ ನಡೆಯುವಂತೆ ಆಗಲಿ ಎಂದಿದ್ದಾರೆ ವಿನೋದ್ ರಾಜ್.
ನಟ ದರ್ಶನ್ ಅವರನ್ನು ನೋಡಲು ಅನೇಕರು ಪರಪ್ಪನ ಅಗ್ರಹಾರಕ್ಕೆ ತೆರಳುತ್ತಿದ್ದಾರೆ. ಕುಟುಂಬದವರು ಮಾತ್ರವಲ್ಲದೇ ಚಿತ್ರರಂಗದ ಆಪ್ತರು ಕೂಡ ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಇಂದು (ಜುಲೈ 22) ನಟ ವಿನೋದ್ ರಾಜ್ ಅವರು ಜೈಲಿಗೆ ಬಂದಿದ್ದಾರೆ. ಅವರ ಜೊತೆ ವಿಜಯಲಕ್ಷ್ಮಿ, ದಿನಕರ್ ತೂಗುದೀಪ್ ಕೂಡ ಇದ್ದರು. ಅಲ್ಲಿ ನಡೆದ ಮಾತುಕಥೆಯ ಬಗ್ಗೆ ವಿನೋದ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘5 ಜನ ಹೋಗಿದ್ದೆವು. ಜೈಲಿನ ನಿಯಮಗಳು ತುಂಬ ಕಟ್ಟುನಿಟ್ಟಾಗಿವೆ. ವಿಜಯಲಕ್ಷ್ಮಿ ಅವರು ಕೂಡ ಹೆಚ್ಚೇನೂ ಮಾತನಾಡಿಲ್ಲ. ಅವರಿಗೆ ಏನೂ ತಿಳಿಯುತ್ತಿಲ್ಲ. ಅವರ ವಕೀಲರು ಮಾತನಾಡಿದರು ಅಷ್ಟೇ. ಈ ಸ್ಥಿತಿಯಲ್ಲಿ ನಾನು ದರ್ಶನ್ ಅವರನ್ನು ನೋಡಬೇಕಿತ್ತಾ? ನನ್ನ ಕಣ್ಣುಗಳನ್ನೇ ನನಗೆ ನಂಬೋಕೆ ಆಗುತ್ತಿಲ್ಲ. ಆದರೆ ನಂಬಲೇಬೇಕಾದ್ದು ಅನಿವಾರ್ಯ ಆಯಿತು’ ಎಂದಿದ್ದಾರೆ ವಿನೋದ್ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos