AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಷಕ್ಕೆ ವಾಪಸ್ಸಾಗುವಂತೆ ಬಿಜೆಪಿ ನಾಯಕರು ಕರೆ ಮಾಡುತ್ತಿದ್ದಾರೆ ಅಂತ ಮತ್ತೊಮ್ಮೆ ಹೇಳಿದ ಈಶ್ವರಪ್ಪ

ಪಕ್ಷಕ್ಕೆ ವಾಪಸ್ಸಾಗುವಂತೆ ಬಿಜೆಪಿ ನಾಯಕರು ಕರೆ ಮಾಡುತ್ತಿದ್ದಾರೆ ಅಂತ ಮತ್ತೊಮ್ಮೆ ಹೇಳಿದ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 22, 2024 | 8:38 PM

Share

ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ ಈಶ್ವರಪ್ಪ, ಆದು ಬಿಜೆಪಿಯ ಮಾತೃ ಸಂಸ್ಥೆ, ಅದು ನೀಡುವ ಸಲಹೆ ಸೂಚನೆಗಳನ್ನು ಜಗಳ ಅನ್ನಲಾಗದು ಎಂದರು. ಅವರು ಮಾತುಗಳನ್ನು ಗಮನಿಸಿ, ತಾವಿನ್ನೂ ಪಕ್ಷದ ಭಾಗ ಎಂಬಂತೆ ಮಾತಾಡುತ್ತಾರೆ. ಬಿಜೆಪಿ ವಾಪಸ್ಸು ಹೋಗಲು ಅವರು ತುದಿಗಾಲ್ಲಲಿ ನಿಂತಿರೋದು ಸ್ಪಷ್ಟವಅಗುತ್ತದೆ.

ವಿಜಯಪುರ: ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಮಾಧ್ಯಮಗಳ ಜೊತೆ ಮಾತಾಡುವಾಗಲೆಲ್ಲ, ಬಿಜೆಪಿಗೆ ವಾಪಸ್ಸು ಹೋಗುವುದು, ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಸಂಪರ್ಕದಲ್ಲಿರುವ, ಮತ್ತು ಪಕ್ಷವನ್ನು ಶುದ್ಧೀಕಣ ಮಾಡುವ ಬಗ್ಗೆ ಮಾತಾಡುತ್ತಾರೆ. ಯಾರೆಲ್ಲ ವಾಪಸ್ಸು ಬರುವಂತೆ ಸಂಪರ್ಕಿಸುತ್ತಿದ್ದಾರೆ ಅಂತ ಯಾವತ್ತೂ ಹೇಳಿಲ್ಲ. ಸಮಾನಮನಸ್ಕರು ಪಕ್ಷವನ್ನು ಶುದ್ದೀಕರಿಸುವ ಬಗ್ಗೆ ಮಾತಾಡುತ್ತಿದ್ದಾರೆ ಎನ್ನುತ್ತಾರೆ. ಸಮಾನ ಮನಸ್ಕರು ಯಾರು? ಜಗದೀಶ್ ಶೆಟ್ಟರ್ ಪಕ್ಷಕ್ಕೆ ವಾಪಸ್ಸು ಹೋಗಿ ಸಂಸದ ಕೂಡ ಆದರು. ಈಶ್ವರಪ್ಪ ಬಿಜೆಪಿಯಿಂದ ಹೊರಬಿದ್ದು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿಯನ್ನೂ ಕಳೆದುಕೊಂಡರು. ಪಕ್ಷದ ಸಂಘಟನೆ ಬಗ್ಗೆ ಅವರು ಮಾತಾಡುತ್ತಾರೆ. ಹಿಂದೆ ಸಾಮೂಹಿಕ ನಾಯಕತ್ವ ಇತ್ತು, ತಾವು, ಅನಂತಕುಮಾರ್, ಬಿಎಸ್ ಯಡಿಯೂರಪ್ಪ, ಬಿವಿ ಆಚಾರ್ಯ ಮೊದಲಾದವರೆಲ್ಲ ಸೇರಿ ಪಕ್ಷದ ಸಂಘಟನೆ ಮಾಡುವಾಗ ಅಧಿಕಾರವಿರಲಿಲ್ಲ, ಆದರೆ ಆನಂದವಿತ್ತು ಎಂದರು. ಆದರೆ ಈಗ ಪಕ್ಷದ ಉಸ್ತುವಾರಿಯೆಲ್ಲ ಅಪ್ಪಮಕ್ಕಳ ಕೈಸೇರಿದೆ, ಅಧಿಕಾರವಿದೆ, ಆನಂದವಿಲ್ಲ ಎಂದು ಈಶ್ವರಪ್ಪ ಹೇಳಿದರು. ಮುಂಬರುವ ದಿನಗಳಲ್ಲಿ ಕೇವಲ ಕೇಂದ್ರದಲ್ಲಿ ಮಾತ್ರ ಅಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆ ಎಂದು ಅವರು ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ, ರಾಯಣ್ಣ ಬ್ರಿಗೇಡ್ ಆರಂಭಿಸುವ ಚಿಂತನೆ ಇದೆ: ಈಶ್ವರಪ್ಪ