AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನೊಳಗೆ ದರ್ಶನ್ ಜೊತೆ ನಡೆದ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ

ಜೈಲಿನೊಳಗೆ ದರ್ಶನ್ ಜೊತೆ ನಡೆದ ಮಾತುಕಥೆ ಬಗ್ಗೆ ವಿನೋದ್ ರಾಜ್ ಭಾವುಕ ಪ್ರತಿಕ್ರಿಯೆ

ಮಾಲತೇಶ ಜಗ್ಗೀನ್
| Edited By: |

Updated on: Jul 22, 2024 | 7:41 PM

Share

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ನಟ ದರ್ಶನ್​ ಅವರ ಪರಿಸ್ಥಿತಿಯ ಬಗ್ಗೆ ವಿನೋದ್​ ರಾಜ್​ ವಿವರಿಸಿದ್ದಾರೆ. ‘ಜೈಲಿನಲ್ಲಿ ದರ್ಶನ್​ ಕಳೆದಿರುವ 33 ದಿನ ತುಂಬ ಕಷ್ಟ. ಸ್ವಾತಂತ್ರ ಇಲ್ಲದೇ ಒಂದೇ ಜಾಗದಲ್ಲಿ ಕುಳಿತು, ಯೋಚನೆ ಮಾಡುತ್ತಾ ಅವರು ಎಷ್ಟು ಸೊರಗಿರಬಹುದು ಅಂತ ನನ್ನ ಮನಸ್ಸಿಗೆ ನೋವಾಗುತ್ತಿದೆ’ ಎಂದು ವಿನೋದ್​ ರಾಜ್​ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ವಿನೋದ್ ರಾಜ್​ ಅವರು ಇಂದು (ಜುಲೈ 22) ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್​ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ‘ಟಿವಿ9 ಕನ್ನಡ’ ಜೊತೆ ಮಾತನಾಡಿದ ಅವರು ಭಾವುಕವಾಗಿ ಪ್ರತಿಕ್ರಿಯಿಸಿದರು. ‘ದರ್ಶನ್​ ಅವರನ್ನು ಓರ್ವ ಕಲಾವಿದ ಎನ್ನುವ ಬದಲು ನಮ್ಮ ಕರುಳ ಸಂಬಂಧದವರು ಎನಿಸುತ್ತದೆ. ಅಷ್ಟು ಪ್ರೀತಿಯಿಂದ ಅಣ್ಣ ಅಂತ ಬಂದು ಅವರು ತಬ್ಬಿಕೊಂಡರು. ಆಗ ಪ್ರಾಣ ಕಳೆದುಕೊಂಡಂತೆ ಆಯ್ತು ನಮಗೆ. ಅಷ್ಟು ಪ್ರೀತಿಯನ್ನು ಹೇಗೆ ಹೇಳಬೇಕು ಅಂತ ತಿಳಿಯುತ್ತಿಲ್ಲ. ಆಪರೇಷನ್​ಗೆ ಹೋಗುವುದಕ್ಕೂ ಮುನ್ನ ನಾನು ಅವರ ಬಳಿ ಫೋನ್​ನಲ್ಲಿ ಮಾತನಾಡಿದ್ದೆ. ಆಪರೇಷನ್​ ವಿಷಯವನ್ನು ಅವರಿಗೆ ಹೇಳಿರಲಿಲ್ಲ. ಆದರೆ ನನ್ನ ಧ್ವನಿಯಿಂದ ಅವರು ಕಂಡುಹಿಡಿದರು. ಯಾಕಣ್ಣ ಡಲ್​ ಆಗಿದ್ದೀರಿ ಅಂತ ಕೇಳಿದರು. ಏನಿಲ್ಲ ಅಂತ ಅಷ್ಟೇ ಹೇಳಿದ್ದೆ. ನಾನು ಅಡ್ಮಿಟ್​ ಆದ ಮರುದಿನ ಈ ಸುದ್ದಿ ಬಂತು’ ಎಂದು ವಿನೋದ್​ ರಾಜ್​ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಾಲತೇಶ ಜಗ್ಗೀನ್
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More