ಶೋಭಾ ಕರಂದ್ಲಾಜೆರಿಂದ ಫಾಕ್ಸ್ ಪಾಸ್, ಮುಡಾ ಹಗರಣದಲ್ಲಿ ಎಲ್ಲ ಪಕ್ಷಗಳ ನಾಯಕರು ಭಾಗಿ ಎಂದ ಸಚಿವೆ!

ಹೊರಗಡೆ ಪಟಾಕಿ ಸಿಡಿಯುವ ಶಬ್ದ ಶೋಭಾ ಅವರನ್ನು ತಡೆದಿರದಿದ್ದರೆ ಅವರು ಮುಡಾ ಹಗರಣದಲ್ಲಿ ಶಾಮೀಲಾಗಿರುವ ಎಲ್ಲ ಪಕ್ಷಗಳ ನಾಯಕರ ಹೆಸರುಗಳನ್ನೂ ಹೇಳಿಬಿಡುತ್ತಿದ್ದರೇನೋ? ಸರಿಯಾದ ಸಮಯಕ್ಕೆ ಅವರು ಮೈಕ್ ಆನ್ ಆಗಿರುವುದನ್ನು ಗಮನಿಸುತ್ತಾರಾದರೂ ಅಷ್ಟರೊಳಗೆ ಪ್ರಮಾದ ಘಟಿಸಿಬಿಟ್ಟಿತ್ತು!

ಶೋಭಾ ಕರಂದ್ಲಾಜೆರಿಂದ ಫಾಕ್ಸ್ ಪಾಸ್, ಮುಡಾ ಹಗರಣದಲ್ಲಿ ಎಲ್ಲ ಪಕ್ಷಗಳ ನಾಯಕರು ಭಾಗಿ ಎಂದ ಸಚಿವೆ!
|

Updated on: Aug 14, 2024 | 6:25 PM

ನೆಲಮಂಗಲ: ಸಾರ್ವಜನಿಕ ಸಮಾರಂಭಗಳಲ್ಲಿ ಮತ್ತು ಟಿವಿ ಕೆಮೆರಾಗಳ ಎದುರು ಕುಳಿತಾಗ ನಮ್ಮ ರಾಜಕಾರಣಿಗಳು ಕೊಂಚ ಎಚ್ಚರ ತಪ್ಪಿದರೆ ಇಂಥ ಅನಾಹುತಗಳು ಸಂಭವಿಸುತ್ತವೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಒಂದು ಎಡವಟ್ಟು ನಡೆದುಹೋಯಿತು. ಚೇರೊಂದರ ಮೇಲೆ ನಿರಾಳವಾಗಿ ಕೂತು ಚಹಾ ಹೀರುತ್ತಾ ಪಕ್ಷದ ಕಾರ್ಯಕರ್ತರೊಂದಿಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದ ಶೋಭಾ ಅವರಿಗೆ ತಮ್ಮ ಎದುರಿನ ಟೇಬಲ್ ಮೇಲಿದ್ದ ಮೈಕ್ ಆನ್ ಆಗಿದೆ ಅನ್ನೋದು ಗಮನಕ್ಕೆ ಬರಲಿಲ್ಲ. ಸಂಸತ್ತಿಗೆ ಕೆಲ ಯುವಕರು ಕ್ಯಾನಿಸ್ಟರ್ ಹಿಡಿದುಕೊಂಡು ನುಗ್ಗಿದ ಪ್ರಕರಣದ ಬಳಿಕ ಪ್ರವೇಶ ಬಹಳ ಕಠಿಣವಾಗಿದೆ ಎನ್ನುತ್ತಿದ್ದ ಶೋಭಾ ಅವರಿಗೆ ಕಾಯರ್ಕರ್ತರೊಬ್ಬರು ಮುಡಾ ಹರಣದ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರಾ ಅಂತ ಕೇಳಿದಾಗ ಶೋಭಾ ಅವರು ಮುಡಾ ಹಗರಣದಲ್ಲಿ ಎಲ್ಲ ಪಕ್ಷದವರು ಶಾಮೀಲಾಗಿದ್ದಾರೆ ಅಂದು ಬಿಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   MUDA Scam: ಪತ್ರಿಕಾ ವರದಿಗಳು ನಿಜವಾಗಿದ್ದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಜಿಟಿ ದೇವೇಗೌಡ

Follow us