MUDA Scam: ಪತ್ರಿಕಾ ವರದಿಗಳು ನಿಜವಾಗಿದ್ದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಜಿಟಿ ದೇವೇಗೌಡ

ಸೈಟುಗಳ ಹಂಚಿಕೆ ಮಾಡುವಾಗ ಜಮೀನು ಮತ್ತು ಅದಕ್ಕೆ ಸಂಬಂಧಿಸಿದ ಲೀಗ್ಯಾಲಿಟಿಯನ್ನು ಪರಿಶೀಲಿಸುವ ಜವಾಬ್ದಾರಿ ಅಧಿಕಾರಿಯದಾಗಿರುತ್ತದೆ ಅಂತ ಹೇಳಿ ಜಿಟಿ ದೇವೇಗೌಡ ಮುಡಾ ಸದಸ್ಯನಾಗಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರೆ ಎಂಬ ಗುಮಾನಿ ಹುಟ್ಟಿದರೆ ಆಶ್ಚರ್ಯವಿಲ್ಲ. ಅವರ ಮಾತುಗಳನ್ನು ಗಮನವಿಟ್ಟು ಕೇಳಿ.

MUDA Scam: ಪತ್ರಿಕಾ ವರದಿಗಳು ನಿಜವಾಗಿದ್ದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಜಿಟಿ ದೇವೇಗೌಡ
|

Updated on: Jul 11, 2024 | 2:30 PM

ಮೈಸೂರು: ಮುಡಾ ಸದಸ್ಯರೂ ಆಗಿರುವ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಇಂದು ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಪಾರ್ವತಿ ಸಿದ್ದರಾಮಯ್ಯನವರಿಗೆ ಹಂಚಿಕೆಯಾಗಿರುವ ಸೈಟುಗಳ ಹಗರಣದ ಬಗ್ಗೆ ಮಾತಾಡಿದರು. ತನಿಖೆ ಮಾಡಲಾಗದಷ್ಟು ಬೃಹತ್ ಹಗರಣವೇನೂ ಇದಲ್ಲ ಎಂದ ದೇವೇಗೌಡ ಮುಡಾದ ಸದಸ್ಯನಾಗಿ ತಮ್ಮ ಹೊಣೆಗಾರಿಕೆ ಬಗ್ಗೆ ಮಾತಾಡಿದರು. ಧೃವಕುಮಾರ್ ಅವರು ಕಮೀಶನರ್ ಆಗಿದ್ದಾಗ, ಮುಡಾದಿಂದ ಸ್ವಾಧೀನಕ್ಕೊಳಗಾದ ಜಮೀನು ಒಡೆಯರಿಗೆ 50:50 ರ ಅನುಪಾತದಲ್ಲ ನಿವೇಶನ ಹಂಚಿಕೆಯಾಗಬೇಕೆಂಬ ನಿಯಮವನ್ನು ಅನುಸರಿಸಲಾಗಿತ್ತೇ ಹೊರತು ಲ್ಯಾಂಡ್ ಟು ಲ್ಯಾಂಡ್ ನಿಯಮದ ಪ್ರಕಾರ ಅಲ್ಲ ಎಂದು ಹೇಳಿದರು. ಈಗ ಪ್ರಶ್ನೆ ಎದ್ದಿರೋದು ಪಾರ್ವತಿಯವರ 3.16 ಎಕರೆ ಜಮೀನು ಬಗ್ಗೆ. ಸಿದ್ದರಾಮಯ್ಯನವರೇ ಆ ನಿರ್ದಿಷ್ಟ ಜಮೀನಿನ ಪರಿವರ್ತನೆ ಮಾಡಿಸಿದ್ದಾರೆ, ಡಿನೋಟಿಫೈ ಮಾಡಿಸಿದ್ದಾರೆ ಅಂತ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿವೆ. ಅದು ನಿಜವೇ ಆಗಿದ್ದರೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಾಧ್ಯಮದವರು ಹೇಳೋವರೆಗೆ ಸೂರಜ್ ರೇವಣ್ಣನ ಲೈಂಗಿಕ ಹಗರಣದ ಬಗ್ಗೆ ಜಿಟಿ ದೇವೇಗೌಡರಿಗೆ ಗೊತ್ತೇ ಇರಲಿಲ್ಲ!

Follow us