ತುಂಬಿದ ಸಭೆಯಲ್ಲಿ ಶಿವಕುಮಾರ್ ತನ್ನನ್ನು ಗದರುತ್ತಾರೆ ಅಂತ ಮೊಹಮ್ಮದ್ ನಲಪಾಡ್ ಭಾವಿಸಿರಲಿಲ್ಲವೇನೋ?

ತುಂಬಿದ ಸಭೆಯಲ್ಲಿ ಶಿವಕುಮಾರ್ ತನ್ನನ್ನು ಗದರುತ್ತಾರೆ ಅಂತ ಮೊಹಮ್ಮದ್ ನಲಪಾಡ್ ಭಾವಿಸಿರಲಿಲ್ಲವೇನೋ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 11, 2024 | 3:20 PM

ಕಾಂಗ್ರೆಸ್ ಕಾರ್ಯಕರ್ತರು ಬಂಡಾಯ ಪ್ರವೃತ್ತಿ ಪ್ರದರ್ಶಿಸಿದರೆ, ಹೇಳಿದ್ದನ್ನು ಮಾಡದಿದ್ದರೆ ಅಂಥವರನ್ನು ಸರಿದಾರಿಗೆ ತರುವ ಕಲೆ ಶಿವಕುಮಾರ್ ಅವರಿಗೆ ಚೆನ್ನಾಗಿ ಗೊತ್ತು. ಆದರೆ ಅವರ ತುಂಬಿದ ಸಭೆಯಲ್ಲಿ ಗದರುತ್ತಾರೆ ಅಂತ ಪ್ರಾಯಶಃ ನಲಪಾಡ್ ಭಾವಿಸಿರಲಿಲ್ಲ. ಶಿವಕುಮಾರ್ ಗದರಿದಾಗ ಅವರ ಮುಖ ಇಂಗು ತಿಂದ ಮಂಗನಂತಾಗಿದ್ದನ್ನು ಎಲ್ಲರೂ ನೋಡಿದರು.

ಬೆಂಗಳೂರು: ಪಕ್ಷದ ಅಧ್ಯಕ್ಷ ಯಾವುದಾದರೂ ಸೂಚನೆ ನೀಡಿದರೆ ಅದನ್ನು ಕಾರ್ಯಕರ್ತರು ಚಾಚೂ ತಪ್ಪದೆ ಪಾಲಿಸುತ್ತಾರೆ. ಅದರೆ ಕೆಲವರಿಗೆ ಪಾಲಿಸದಿದ್ದರೆ ಏನಾದೀತು ಎಂಬ ಧೋರಣೆ. ರಾಜ್ಯ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಮತ್ತು ಕೋಲಾರದ ಒಬ್ಬ ಕಾರ್ಯಕರ್ತ-ಇವರಿಬ್ಬರು; ಡಿಕೆ ಶಿವಕುಮಾರ್ ವಿಧಾನಸೌಧದಲ್ಲಿ ಬ್ಯಾನರ್ ಗಳನ್ನು ಕಟ್ಟಿಕೂಡದೆಂದು ಹೇಳಿದ್ದರೂ ಅವರ ಮಾತು ಉಲ್ಲಂಘಿಸಿ ಬ್ಯಾನರ್ ಕಟ್ಟಿಸಿದ್ದಾರೆ. ನಂತರ ನಡೆದ ಸಭೆಯೊಂದರಲ್ಲಿ ಶಿವಕುಮಾರ್ ಎಲ್ಲರೆದುರೇ ಮೊಹಮ್ಮದ್ ನಲಪಾಡ್ ನ ನೀರಿಳಿಸಿದರು. ಬ್ಯಾನರ್ ಕಟ್ಟಕೂಡದು ಅಂತ ಹೇಳಿದರೂ ಯಾಕಯ್ಯ ಕಟ್ದೆ? ಅವನು ಇನ್ನೊಬ್ಬ ಕೋಲಾರದವನೆಲ್ಲಿ? ನಿನ್ನ ಮತ್ತು ಅವನ ವಿರುದ್ಧ ನಾನೇ ಕೇಸ್ ಹಾಕಿಸ್ತಿದ್ದೀನಿ ಎಂದು ಗದರಿದರು. ಶಿವಕುಮಾರ್ ಕೋಪ ಕಂಡು ಬೆಚ್ಚಿ ಬೀಳುವ ನಲಪಾಡ್ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ ಅಂತ ಹೇಳುವಹಾಗೆ, ಮುಗುಳ್ನಗುತ್ತಾ ತನ್ನ ಸೀಟಿನಲ್ಲಿ ಬಂದು ಕೂರುತ್ತಾರೆ. ಕೂತ ಮೇಲೂ ಗದರುವುದನ್ನು ಶಿವಕುಮಾರ್ ಮುಂದುವರಿಸಿದಾಗ ನಲಪಾಡ್ ತನಗಾದ ಅವಮಾನಕ್ಕೆ ಮುಖ ಮುಚ್ಚಿಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಟ್ ಕಾಯಿನ್ ಪ್ರಕರಣದಲ್ಲಿ ಯುವ ಕಾಂಗ್ರೆಸ್ ನಾಯಕನಿಗೆ ಶಾಕ್; ವಿಚಾರಣೆಗೆ ಹಾಜರಾದ ಮೊಹಮ್ಮದ್ ನಲಪಾಡ್