ವಾಲ್ಮೀಕಿ ನಿಗಮ ಹಗರಣದ ತನಿಖಾ ವರದಿ ಎಲ್ಲಿದೆ ಅಂತ ಸಿದ್ದಾರಾಮಯ್ಯ ಪತ್ರಕರ್ತನ ಮೇಲೆ ಸಿಡಿದೆದ್ದರು!
ನಿನ್ನೆ ವರದಿ ಹಾಗಿರುವ ಹಾಗೆ ಮುಡಾ ಪ್ರಕರಣ ಬೆಳಕಿಗೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ್ದಾರೆ. ಅವರ ಪತ್ನಿಗೆ ಹಂಚಿಕೆಯಾಗಿರುವ ಸೈಟುಗಳು ಅಕ್ರಮ ಎಂಬ ಆರೋಪ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಪ್ರಶ್ನೆಗಳ ಸುರಿಮಳೆಗೈಯುವುದು ನಿಶ್ಚಿತವಾಗಿತ್ತು.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಾಗ್ಗೆ ಮಾಧ್ಯಮದವರ ಮೇಲೆ ಉರಿದುಬೀಳೋದನ್ನು ನಾವು ತೋರಿಸುತ್ತಿರುತ್ತೇವೆ. ಇವತ್ತು ನಗರದಲ್ಲಿ ಅಂಥದೊಂದು ಘಟನೆ ನಡೆಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹೊಣೆಗಾರಿಕೆಯನ್ನು ನಿಗದಿ ಮಾಡುವ ಪ್ರಶ್ನೆ ಕೇಳಿದಾಗ ಸಿದ್ದರಾಮಯ್ಯ ತನಿಖೆಯ ವರದಿ ಸಿಕ್ಕ ಮೇಲೆ ತಾನೇ ಹೊಣೆಗಾರಿಕೆಯ ಪ್ರಶ್ನೆ ಬರೋದು ಅನ್ನುತ್ತಾರೆ. ಅದಕ್ಕೆ ಪತ್ರಕರ್ತರೊಬ್ಬರು ವರದಿ ಬಂದಿದೆಯಲ್ಲ ಸರ್ ಅಂದಾಗಲೇ ಕೋಪಾವಿಷ್ಠರಾಗುವ ಸಿಎಂ, ಎಲ್ಲಯ್ಯ ಬಂದಿದೆ ವರದಿ? ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ವರದಿ ಹೇಗೆ ಬರುತ್ತದೆ ಅನ್ನುತ್ತಾರೆ. ಆಗ ಬೇರೆ ಪತ್ರಕರ್ತರೊಬ್ಬರು ತಮ್ಮ ಮೊಬೈಲ್ ನಲ್ಲಿ ವರದಿ ತೋರಿಸಿದಾಗ, ಶಾಂತರಾಗಿ ಅದು ಎಸ್ಐಟಿ ಅಬ್ಸರ್ವೇಶನ್, ವರದಿ ಹೇಗಾಗುತ್ತದೆ ಅನ್ನುತ್ತಾರೆ. ನಾಳೆ ಮೈಸೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದಾಗ ಸಿದ್ದರಾಮಯ್ಯ ಯಾವುದಕ್ಕೆ ಪ್ರತಿಭಟನೆ ಅನ್ನುತ್ತಾರೆ. ಮುಡಾ ಹಗರಣದ ಬಗ್ಗೆ ಎಂದು ಮಾದ್ಯಮ ಪ್ರತಿನಿಧಿಗಳು ಹೇಳಿದಾಗ, ಅವರು ಮಾಡಲಿರೋದು ರಾಜಕೀಯ ಪ್ರೇರಿತ ಪ್ರತಿಭಟನೆ ಅದಕ್ಕೆ ಕೌಂಟರ್ ಆಗಿ ನಾವೂ ಬಿಜೆಪಿ ವಿರುದ್ಧ ರಾಜಕೀಯ ಪ್ರತಿಭಟನೆ ಮಾಡುತ್ತೇವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಗೆಬ್ಬೆದ್ದು ಹೋಗಿದೆ, ನಮ್ಮಿಂದಲೂ ತಪ್ಪಾಗಿದೆ ಸರಿ ಮಾಡುತ್ತೇವೆ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ