CMF Phone 1: ಸೂಪರ್ ಡಿಸೈನ್ ಮತ್ತು ಬೆಸ್ಟ್ ಪ್ರೈಸ್​ನಲ್ಲಿ ಬಂತು ಸಿಎಂಎಫ್​ ಫೋನ್ 1

CMF Phone 1: ಸೂಪರ್ ಡಿಸೈನ್ ಮತ್ತು ಬೆಸ್ಟ್ ಪ್ರೈಸ್​ನಲ್ಲಿ ಬಂತು ಸಿಎಂಎಫ್​ ಫೋನ್ 1

ಕಿರಣ್​ ಐಜಿ
|

Updated on: Jul 11, 2024 | 12:20 PM

ಸಿಎಂಎಫ್ ಭಾರತದಲ್ಲಿ ಹೊಸ ಸಿಎಂಎಫ್​ ಫೋನ್ 1 ಬಿಡುಗಡೆ ಮಾಡಿದೆ. ಬಜೆಟ್ ದರಕ್ಕೆ ಲಭ್ಯವಿರುವ ಈ ಫೋನ್​ ಹಿಂಭಾಗದ ಕವರ್ ಅನ್ನು ಬದಲಾಯಿಸಬಹುದು. ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆಸರ್, 50 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ಈ ಫೋನ್​ನ ವಿಶೇಷತೆಯಾಗಿದೆ.

ಒನ್​ಪ್ಲಸ್ ಸ್ಮಾರ್ಟ್​ಫೋನ್​ಗಳು ಎಲ್ಲರಿಗೂ ಚಿರಪರಿಚಿತ. ಒನ್​ಪ್ಲಸ್​ನ ಸಹಸಂಸ್ಥಾಪಕ ನಂತರದಲ್ಲಿ ನಥಿಂಗ್ ಬ್ರ್ಯಾಂಡ್ ರೂಪಿಸಿ ಅದನ್ನು ಜನಪ್ರಿಯಗೊಳಿಸಿದ್ದಾರೆ. ಈಗ ಮಾರುಕಟ್ಟೆಗೆ ನಥಿಂಗ್ ಗ್ರೂಪ್​ನಿಂದ ಸಿಎಂಎಫ್​ ಎಂಬ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿದೆ. ಸಿಎಂಎಫ್ ಭಾರತದಲ್ಲಿ ಹೊಸ ಸಿಎಂಎಫ್​ ಫೋನ್ 1 ಬಿಡುಗಡೆ ಮಾಡಿದೆ. ಬಜೆಟ್ ದರಕ್ಕೆ ಲಭ್ಯವಿರುವ ಈ ಫೋನ್​ ಹಿಂಭಾಗದ ಕವರ್ ಅನ್ನು ಬದಲಾಯಿಸಬಹುದು. ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆಸರ್, 50 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5,000mAh ಬ್ಯಾಟರಿ ಈ ಫೋನ್​ನ ವಿಶೇಷತೆಯಾಗಿದೆ. ಜತೆಗೆ ಆಕರ್ಷಕ ದರದಲ್ಲಿ ಈ ಹೊಸ ಫೋನ್ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.