ಮಾಧ್ಯಮದವರು ಹೇಳೋವರೆಗೆ ಸೂರಜ್ ರೇವಣ್ಣನ ಲೈಂಗಿಕ ಹಗರಣದ ಬಗ್ಗೆ ಜಿಟಿ ದೇವೇಗೌಡರಿಗೆ ಗೊತ್ತೇ ಇರಲಿಲ್ಲ!

ಮಾಧ್ಯಮದವರು ಹೇಳೋವರೆಗೆ ಸೂರಜ್ ರೇವಣ್ಣನ ಲೈಂಗಿಕ ಹಗರಣದ ಬಗ್ಗೆ ಜಿಟಿ ದೇವೇಗೌಡರಿಗೆ ಗೊತ್ತೇ ಇರಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2024 | 1:22 PM

ಮೊನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಯಾರೋ ಸಚಿವರು ದರ್ಶನ್ ವಿಷಯ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಥ ವಿಷಯಗಳ ಬಗ್ಗೆ ಚರ್ಚೆ ಬೇಡ, ತಪ್ಪು ಮಾಡಿದವರು ಯಾರೇ ಆಗಿರಲಿ, ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು ಎಂದಿದ್ದಾರೆ ಎಂದ ದೇವೇಗೌಡ ತಮ್ಮ ಪಕ್ಷ ತಪ್ಪು ಮಾಡಿದವರು ಜೊತೆ ನಿಂತುಕೊಳ್ಳಲ್ಲ ಅಂತ ಹೇಳಿದರು.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಮುಖಂಡ ಜಿಟಿ ದೇವೇಗೌಡ (GT Devegowda) ಅವರು ಸೂರಜ್ ರೇವಣ್ಣ (Suraj Revanna) ಸಹ ಲೈಂಗಿಕ ಹಗರಣದಲ್ಲಿ ಸಿಲುಕಿದ್ದು, ಪೊಲೀಸ್ ಅವರನ್ನು ಅರೆಸ್ಟ್ ಮಾಡಿದ್ದು ತನಗೆ ಗೊತ್ತಿರಲಿಲ್ಲ ಎಂಬಂತೆ ಅಮಾಯಕತೆ ಪ್ರದರ್ಶಿಸಿದರು! ಸೂರಜ್ ಯುವಕನೊಬ್ಬನನ್ನು ಅನೈಸರ್ಗಿಕ ಲೈಂಗಿಕ ಕ್ರೀಡೆಗೆ (sodomy) ಬಳಸಿಕೊಂಡಿದ್ದು ಬೇರೆ ಗ್ರಹದ ಜೀವಿಗಳಿಗೂ ಗೊತ್ತಾಗಿದೆ ಆದರೆ ಪಕ್ಷದ ಕೋರ್ ಕಮಿಟಿ ಅಧ್ಯಕ್ಷನಿಗೆ ಮಾತ್ರ ಇವತ್ತು ಮಾಧ್ಯಮದವರು ಹೇಳಿದ ನಂತರವೇ ಗೊತ್ತಾಗಿದ್ದು!! ನಂತರ ಸಾವರಿಸಿಕೊಂಡ ಅವರು, ಸೂರಜ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲೇಬೇಕು, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ನನ್ನ ಮಗ ಅಥವಾ ಕುಟುಂಬಸ್ಥರು ತಪ್ಪು ಮಾಡಿದ್ದರೂ ಶಿಕ್ಷೆಯಾಗಬೇಕು. ಪ್ರಜ್ವಲ್ ರೇವಣ್ಣ ವಿಷಯದಲ್ಲಿ ನಾವು ಇದೇ ನಿಲುವನ್ನು ತಳೆದಿದ್ದೆವು ಮತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳಿದರು. ಮೊನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಯಾರೋ ಸಚಿವರು ದರ್ಶನ್ ವಿಷಯ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಥ ವಿಷಯಗಳ ಬಗ್ಗೆ ಚರ್ಚೆ ಬೇಡ, ತಪ್ಪು ಮಾಡಿದವರು ಯಾರೇ ಆಗಿರಲಿ, ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು ಎಂದಿದ್ದಾರೆ ಎಂದ ದೇವೇಗೌಡ ತಮ್ಮ ಪಕ್ಷ ತಪ್ಪು ಮಾಡಿದವರು ಜೊತೆ ನಿಂತುಕೊಳ್ಳಲ್ಲ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್​ ಸುಮಾರು ದಿನ ಪರಾರಿಯಾಗಿದ್ದ, ಈಗ ಸೂರಜ್‌ ಒಂದೇ ದಿನದಲ್ಲಿ ಪೊಲೀಸ್‌ ಬಲೆಗೆ ಬಿದ್ದಿದ್ದೇ ರೋಚಕ!