ಈ ಎಲ್ ಎಕ್ಸ್ (ಆರ್ ಎಲ್ ವಿ) ಯ ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದ ಇಸ್ರೋ
ಇಂದು ಬೆಳಗ್ಗೆ 7.10 ಕ್ಕೆ ಅದು ಚಿತ್ರದುರ್ಗ ಜಿಲ್ಲೆಯ ಕುದಾಪುರ ಗ್ರಾಮದಲ್ಲ್ಲಿರುವ ಎಟಿಆರ್ ನಲ್ಲಿ ಮರಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (ಆರ್ ಎಲ್ ವಿ) ಎಲ್ ಈ ಎಕ್ಸ್ ನ ಮೂರನೇ ಮತ್ತು ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದೆ.
ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿನೂತನ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ ಅನ್ನೋದು ಎಲ್ಲ ಭಾರತೀಯರಿಗೆ ಗೊತ್ತಿರುವ ಸಂಗತಿ. ಇಂದು ಬೆಳಗ್ಗೆ 7.10 ಕ್ಕೆ ಅದು ಚಿತ್ರದುರ್ಗ ಜಿಲ್ಲೆಯ ಕುದಾಪುರ ಗ್ರಾಮದಲ್ಲಿರುವ ಎಟಿಆರ್ ನಲ್ಲಿ (Kudapur ATR) ಮರಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ (ಆರ್ ಎಲ್ ವಿ) ಎಲ್ ಈ ಎಕ್ಸ್ ನ (ELX RLV) ಮೂರನೇ ಮತ್ತು ಅಂತಿಮ ಹಂತದ ಲ್ಯಾಂಡಿಂಗ್ ಪ್ರಯೋಗವನ್ನು ಯಶಸ್ವೀಯಾಗಿ ಪೂರ್ಣಗೊಳಿಸಿದೆ. ದೃಶ್ಯಗಳಲ್ಲಿ ಆರ್ ಎಲ್ ವಿ ಆಕಾಶದಿಂದ ಶರವೇಗದಲ್ಲಿ ಹಾರುತ್ತಾ ಬಂದು ಕುದಾಪುರದ ಎಟಿಎಸ್ ನಲ್ಲಿ ಲ್ಯಾಂಡ್ ಆಗುತ್ತಿರುವ ದೃಶ್ಯ ಮೈ ನವಿರೇಳಿಸುತ್ತದೆ. ಇಸ್ರೋ ಸಂಸ್ಥೆಯು ತನ್ನ ಸಂತಸವನ್ನು ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದೆ.
Just In | #ISRO performed its third and final Landing Experiment of Reusable Launch Vehicle (RLV) LEX on June 23, 2024. pic.twitter.com/aVshwijbvv
— ISRO InSight (@ISROSight) June 23, 2024
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ