ದರ್ಶನ್ ಪ್ರಕರಣದ ಬಗ್ಗೆ ಹಳೆ ಗೆಳೆಯ ಓಂ ಪ್ರಕಾಶ್ ರಾವ್ ಮಾತು

ದರ್ಶನ್ ಪ್ರಕರಣದ ಬಗ್ಗೆ ಹಳೆ ಗೆಳೆಯ ಓಂ ಪ್ರಕಾಶ್ ರಾವ್ ಮಾತು

ಮಂಜುನಾಥ ಸಿ.
|

Updated on: Jun 23, 2024 | 2:28 PM

ದರ್ಶನ್ ತೂಗುದೀಪ ಜೊತೆಗೆ ಈ ಹಿಂದೆ ಸಿನಿಮಾ ಮಾಡಿ ಬಾಂಧವ್ಯ ಹೊಂದಿದ್ದ ಓಂ ಪ್ರಕಾಶ್ ರಾವ್ ಆ ನಂತರ ಪರಸ್ಪರ ದೂರಾಗಿದ್ದರು. ಇದೀಗ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಸಂದರ್ಭದಲ್ಲಿ ಓಂ ಪ್ರಕಾಶ್, ದರ್ಶನ್ ಕುರಿತು ಮಾತನಾಡಿದ್ದಾರೆ.

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್​ ಕುರಿತು ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ, ನಿರ್ಮಾಪಕರೂ ಆಗಿರುವ ಓಂ ಪ್ರಕಾಶ್ ರಾವ್ ಈ ಹಿಂದೆ ದರ್ಶನ್ ಜೊತೆ ಸಿನಿಮಾ ಮಾಡಿದ್ದು, ಆ ನಂತರ ಕೆಲವು ಕಾರಣಗಳಿಗಾಗಿ ಪರಸ್ಪರ ದೂರಾದರು. ಇದೀಗ ದರ್ಶನ್ ಕೊಲೆ ಆರೋಪಿಯಾಗಿ ಜೈಲು ಸೇರಿರುವ ಕಾರಣ ಓಂ ಪ್ರಕಾಶ್ ರಾವ್, ನಟ ದರ್ಶನ್ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಳ್ಳೆಯ ಸಿನಿಮಾಗಳು, ಅಭಿಮಾನಿಗಳು, ಕುಟುಂಬ ಎಲ್ಲವನ್ನೂ ಹೊಂದಿದ್ದ ದರ್ಶನ್​ಗೆ ಇದು ಬೇಕಿರಲಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ