AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ: ಇನ್ಫೋಸಿಸ್​, ಜಿಲ್ಲಾಡಳಿತದಿಂದ ನೂತನ ಪ್ರಯತ್ನ

ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ: ಇನ್ಫೋಸಿಸ್​, ಜಿಲ್ಲಾಡಳಿತದಿಂದ ನೂತನ ಪ್ರಯತ್ನ

ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Jun 23, 2024 | 3:33 PM

Share

ಚಾಮರಾಜನಗರ ಜಿಲ್ಲಾಡಳಿತದ ಸಹಾಯದೊಂದಿಗೆ ಇನ್ಪೋಸಿಸ್ ರೋಟರಿ ಕಡೆಯಿಂದ ಆಸಕ್ತಿಯುಳ್ಳ ಯುವ ವಿಚಾರಣಾಧೀನ ಕೈದಿಗಳಿಗೆ ಶಿಕ್ಷಣ, ಟ್ಯಾಲಿ, ಎಕ್ಸ್ ಎಲ್, ಡಾಟಾ ಎಂಟ್ರಿ ಸೇರಿ ವಿವಿಧ ಬಗೆಯ ಶಿಕ್ಷಣ ಹೇಳಿ ಕೊಡಲಾಗುತ್ತಿದೆ. ಕಾರಾಗೃಹದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ತರಬೇತಿ ನೀಡಲಾಗಿದೆ. ಬಿಡುಗಡೆ ಬಳಿಕ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಸ್ವಾವಲಂಭಿಯಾಗಿ ಬದುಕಲು ಇದು ಸಹಾಯಕವಾಗಿದೆ.

ಚಾಮರಾಜನಗರ, ಜೂನ್​ 23: ಚಾಮರಾಜನಗರದ (Chamarajanagar) ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದೆ. ಆ ಮೂಲಕ ಇನ್ಫೋಸಿಸ್ ಹಾಗೂ ಜಿಲ್ಲಾಡಳಿತ ಜೈಲಿನಿಂದ ಬಿಡುಗಡೆ ಆದವರಿಗೆ ಹೊಸ ಜೀವನದ ಪಾಠ ಹೇಳಿಕೊಟ್ಟಿದೆ. ವಿವಿಧ ಅಪರಾಧಗಳಲ್ಲಿ ನೂರಾರು ಮಂದಿ ಭಾಗಿಯಾಗಿ ಜೈಲು ಸೇರಿದ್ದರು. ಆಸಕ್ತಿಯುಳ್ಳ ಯುವ ವಿಚಾರಣಾಧೀನ ಕೈದಿಗಳಿಗೆ ಚಾಮರಾಜನಗರ ಜಿಲ್ಲಾಡಳಿತದ ಸಹಾಯದೊಂದಿಗೆ ಇನ್ಪೋಸಿಸ್ ರೋಟರಿ ಕಡೆಯಿಂದ ಶಿಕ್ಷಣ, ಟ್ಯಾಲಿ, ಎಕ್ಸ್ ಎಲ್, ಡಾಟಾ ಎಂಟ್ರಿ ಸೇರಿ ವಿವಿಧ ಬಗೆಯ ಶಿಕ್ಷಣ ಹೇಳಿ ಕೊಡಲಾಗುತ್ತಿದೆ. ಕಾರಾಗೃಹದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಆಫ್ ಲೈನ್, ಆನ್ ಲೈನ್ ಕ್ಲಾಸಸ್​ ಮಾಡಲಾಗಿದೆ. ಬಿಡುಗಡೆ ಬಳಿಕ ಅಪರಾಧ ಕೃತ್ಯದಲ್ಲಿ ಭಾಗಿಯಾಗದೆ ಸ್ವಾವಲಂಭಿಯಾಗಿ ಬದುಕಲು ಇದು ಸಹಾಯಕವಾಗಿದೆ. ಈ ಹಿನ್ನಲೆ ಕಾರಾಗೃಹದಲ್ಲಿರುವ ಕೈದಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jun 23, 2024 03:32 PM
Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More