ಮಾಜಿ ಸಚಿವ ಬಿ ನಾಗೇಂದ್ರ ಮನೆ ಮೇಲೆ ದಾಳಿ ನಡೆಸುವ ಅವಕಾಶ ಈಡಿಗೆ ಇಲ್ಲ: ಡಿಕೆ ಶಿವಕುಮಾರ್

ಮಾಜಿ ಸಚಿವ ಬಿ ನಾಗೇಂದ್ರ ಮನೆ ಮೇಲೆ ದಾಳಿ ನಡೆಸುವ ಅವಕಾಶ ಈಡಿಗೆ ಇಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 11, 2024 | 12:45 PM

ಬೆಂಗಳೂರು ನಗರದ ಬಿಜೆಪಿ ನಾಯಕ ಎನ್ ಆರ್ ರಮೇಶ್ ಜಾರಿ ನಿರ್ದೇನಾಲಯಕ್ಕೆ ದೂರು ನೀಡಿರುವುದನ್ನು ಶಿವಕುಮಾರ್ ಅವರಿಗೆ ಪತ್ರಕರ್ತರು ತಿಳಿಸಿದಾಗ, ಅವರ ದೂರನ್ನು ಮಾನ್ಯ ಮಾಡಲು ಸ್ವೀಕರಿಸಲು ಬರಲ್ಲ, ದೂರು ಸಲ್ಲಿಕೆಯಾಗಬೇಕಾದರೆ ಅದಕ್ಕೊಂದು ವ್ಯವಸ್ಥೆ ಇದೆ ಎಂದು ಹೇಳಿದರು.

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿ ಹಿನ್ನಡೆಯಾಯಿತು ಅಂತ ಅಧ್ಯಯನ ಮಾಡಲು ಆಮಿಸಿರುವ ಎಐಸಿಸಿಯ ಸತ್ಯಶೋಧನಾ ತಂಡವನ್ನು ಸ್ವಾಗತಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಕೆ ಶಿವಕುಮಾರ್, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸುವ ಅವಶ್ಯಕತೆ ಇರಲಿಲ್ಲ. ನಿರ್ದಿಷ್ಟ ಕೋಟಿ ರೂ. ಗಳವರೆಗೆ ಅವ್ಯವಹಾರ ನಡೆದಿದ್ದರೆ ಸಿಬಿಐಗೆ ದಾಳಿ ನಡೆಸುವ ಅವಕಾಶವಿದೆ, ಅದರೆ ಈಡಿಗೆ ಇಲ್ಲ ಎಂದು ಶಿವಕುಮಾರ್ ಹೇಳಿದರು. ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ, ಮತ್ತು ನಾಗೇಂದ್ರ ಸ್ವಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದಾರೆ, ಕಾನೂನು ಪ್ರಕಾರ ನಡೆಯಬೇಕಿರುವ ಪ್ರಕ್ರಿಯೆಗಳೆಲ್ಲ ನಡೆಯುತ್ತಿವೆ ಎಂದು ಶಿವಕುಮಾರ್ ಹೇಳಿದರು. ಈಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ ಅಂತ ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತೀಕಾರದ ಕ್ರಮವಾಗಿ ಈಡಿ ದಾಳಿ ನಡೆದಿದೆಯೇ ಅಂತ ಕೇಳಿದ್ದಕ್ಕೆ ಶಿವಕುಮಾರ್, ಅವರ ತನಿಖೆಯೆಲ್ಲ ಮುಗಿದ ಬಳಿಕ ಮಾತಾಡುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ ಕೆಲಸ ಮಾಡಿಲ್ಲವೆನ್ನುವುದಕ್ಕೆ ಆ 10 ಸಾವಿರ ಅರ್ಜಿಗಳೇ ಸಾಕ್ಷಿ: ಡಿಕೆ ಶಿವಕುಮಾರ್ ತಿರುಗೇಟು