CBI
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ಭಾರತದ ಪ್ರಮುಖ ಅಪರಾಧ ತನಿಖಾ ಸಂಸ್ಥೆಯಾಗಿದ್ದು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೂಲತಃ ಭ್ರಷ್ಟಾಚಾರ ಪ್ರಕರಣಗಳ ಮೇಲೆ ಕೇಂದ್ರೀಕರಿಸಿದ ಇದು 1965 ರಲ್ಲಿ ವಿವಿಧ ಕೇಂದ್ರ ಕಾನೂನು ಉಲ್ಲಂಘನೆಗಳು, ಬಹು-ರಾಜ್ಯ ಅಪರಾಧಗಳು ಮತ್ತು ಅಂತರರಾಷ್ಟ್ರೀಯ ಪ್ರಕರಣಗಳನ್ನು ಒಳಗೊಳ್ಳಲು ತನ್ನ ಪಾತ್ರವನ್ನು ವಿಸ್ತರಿಸಿತು. ಇಂಟರ್‌ಪೋಲ್‌ನೊಂದಿಗೆ ಭಾರತದ ಸಂಪರ್ಕದ ಕೇಂದ್ರವಾಗಿದ್ದರೂ, ಸಿಬಿಐ ಅಕ್ರಮಗಳು, ರಾಜಕೀಯ ಪ್ರಭಾವ ಮತ್ತು ಕಡಿಮೆ ಶಿಕ್ಷೆಯ ಪ್ರಮಾಣಕ್ಕಾಗಿ ಟೀಕೆಗಳನ್ನು ಎದುರಿಸಿದೆ. ಗಮನಾರ್ಹವಾಗಿ, ಇದು ಮಾಹಿತಿ ಹಕ್ಕು ಕಾಯ್ದೆಯಿಂದ ವಿನಾಯಿತಿ ಪಡೆದಿದೆ.
5 ಕೋಟಿ ರೂ ನಗದು, ಮರ್ಸಿಡಿಸ್, ಆಡಿ ಕಾರುಗಳು, ಕೆಜಿಗಟ್ಟಲೆ ಚಿನ್ನ ಸಹಿತ ಭ್ರಷ್ಟ ಐಪಿಎಸ್ ಅಧಿಕಾರಿ ಸೆರೆ!
ಪಂಜಾಬ್ ಡಿಐಜಿ ಹರ್‌ಚರಣ್ ಸಿಂಗ್ ಬುಲ್ಲಾರ್ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದಾರೆ. 8 ಲಕ್ಷ ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಡಿಐಜಿ ಮನೆಯಲ್ಲಿ 5 ಕೋಟಿ ರೂ. ನಗದು, 1.5 ಕೆಜಿ ಚಿನ್ನ ಸೇರಿ ಅಪಾರ ಅಕ್ರಮ ಸಂಪತ್ತು ಪತ್ತೆಯಾಗಿದೆ.
- Ganapathi Sharma
- Updated on: Oct 17, 2025
- 7:26 am
ಕರೂರು ಕಾಲ್ತುಳಿತ ಘಟನೆ: ಸಿಬಿಐಗೆ ತನಿಖೆ ಹೊಣೆ ವಹಿಸಿದ ಸುಪ್ರೀಂಕೋರ್ಟ್
SC Hands Over Karur Stampede Investigation To CBI: ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ನಟ ವಿಜಯ್ ರಾಜಕೀಯ ಕಾರ್ಯಕ್ರಮದಲ್ಲಿ ಕಾಲ್ತುಳಿತವಾಗಿ ಹಲವರು ಬಲಿಯಾಗಿದ್ದರು. ಆ ಘಟನೆಯ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿ ಸರ್ವೋಚ್ಚ ನ್ಯಾಯಾಲಯ ಇಂದು (ಅ. 13) ಆದೇಶ ಹೊರಡಿಸಿದೆ. ನಟ ವಿಜಯ್ ಕೂಡ ಆ ಘಟನೆಯನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಒತ್ತಾಯಿಸಿದ್ದರು.
- Vijaya Sarathy SN
- Updated on: Oct 13, 2025
- 1:07 pm
ಸಿಬಿಐ ದಾಳಿ: ಕರ್ನಾಟಕ ವಾಲ್ಮೀಕಿ ನಿಗಮ ಹಗರಣದಲ್ಲಿ ಬಿಜೆಪಿಗೂ ನಂಟು?
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ Valmiki Scam) ವರ್ಗಾವಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಬಳಿಕ ಇದೀಗ ಸಿಬಿಐ ದಾಳಿ ಮಾಡಿದೆ. ಹೌದು..ಬಳ್ಳಾರಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಗೋವಿಂದರಾಜಲು ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ. ಇಂದು ಬೆಳಗ್ಗೆ 3 ಕಾರುಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದ CBI ಅಧಿಕಾರಿಗಳು, ಗೋವಿಂದರಾಜಲು ಮನೆಯಿಂದ ಕೆಲ ಮಹತ್ವದ ದಾಖಲೆಗಳನ್ನು ಮೂಟೆಯಲ್ಲಿ ಕೊಂಡೊಯ್ದಿದ್ದಾರೆ. ಹಾಗಾದ್ರೆ, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿಜೆಪಿಗೂ ನಂಟು ಇದೆಯಾ ಎನ್ನು ಪ್ರಶ್ನೆಗಳು ಉದ್ಭವಿಸಿವೆ.
- Ramesh B Jawalagera
- Updated on: Sep 15, 2025
- 6:03 pm
ಬೆಂಗಳೂರಿನಲ್ಲಿ ಲಕ್ಷಾಂತರ ರೂ. ವಂಚನೆ: ಇಮೇಜ್ ಸರ್ಚ್ ಟೂಲ್ಗಳನ್ನು ಬಳಸಿ 20 ವರ್ಷಗಳ ನಂತರ ಆರೋಪಿಯ ಬಂಧಿಸಿದ ಸಿಬಿಐ!
20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಂಕ್ ವಂಚನೆ ಆರೋಪಿ ಮಣಿ ಎಂ ಶೇಖರ್ ಎಂಬಾಕೆಯನ್ನು ಇಮೇಜ್ ಸರ್ಚ್ ಟೂಲ್ಗಳ ನೆರವಿನಿಂದ ಪತ್ತೆ ಮಾಡಿ ಸಿಬಿಐ ಬಂಧಿಸಿದೆ. ಆರೋಪಿಯು ಮಧ್ಯಪ್ರದೇಶದ ಇಂದೋರ್‌ನಲ್ಲಿ ವಾಸಿಸುತ್ತಿದ್ದರು. ಎಸ್ಬಿಐ ಬ್ಯಾಂಕ್ನ ಬೆಂಗಳೂರಿನ ಶಾಖೆಗೆ 8 ಲಕ್ಷ ರೂಪಾಯಿಗಳ ವಂಚನೆ ಪ್ರಕರಣ ಇದಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಣಿ ಎಂ ಶೇಖರ್ ಪತಿ ರಾಮಲಿಂಗಂ ಶೇಖರ್ ಈಗಾಗಲೇ ಮೃತಪಟ್ಟಿರುವುದು ಗೊತ್ತಾಗಿದೆ.
- Web contact
- Updated on: Jul 18, 2025
- 10:01 am
Forgery: 6,200 ಕೋಟಿ ರೂ ಸಾಲ ಅಕ್ರಮ ಪ್ರಕರಣ, ಯುಕೋ ಬ್ಯಾಂಕ್ ಮಾಜಿ ಮುಖ್ಯಸ್ಥರ ಬಂಧನ; ಮೇ 21ರವರೆಗೆ ಇಡಿ ಕಸ್ಟಡಿಗೆ
Former UCO bank chairman Subodh Kumar Goel arrested by ED: ಕಾನ್ಕ್ಯಾಸ್ಟ್ ಸ್ಟೀಲ್ ಕಂಪನಿಯ 6,200 ಕೋಟಿ ರೂ ಅಕ್ರಮ ಸಾಲ ಆರೋಪದ ಪ್ರಕರಣದಲ್ಲಿ ಯುಕೋ ಬ್ಯಾಂಕ್ ಮಾಜಿ ಛೇರ್ಮನ್ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಲಾಗಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳು ಮೇ 16ರಂದು ಬಂಧಿಸಿದ್ದಾರೆ. ನ್ಯಾಯಾಲಯವು ಅವರನ್ನು ಮೇ 21ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ. ಈ ಪ್ರಕರಣ ಹಾಗೂ ಯುಕೋ ಬ್ಯಾಂಕ್ನ ಪಾತ್ರ ಇತ್ಯಾದಿ ವಿವರ ಇಲ್ಲಿದೆ...
- Vijaya Sarathy SN
- Updated on: May 19, 2025
- 12:41 pm
ಯೋಗೀಶ್ ಗೌಡ ಕೊಲೆ ಪ್ರಕರಣ: ಮಲ್ಲಮ್ಮ ಸಾಕ್ಷ್ಯ ಹೇಳಿಕೆ ಬೇಡ ಎಂದು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ!
ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ತೀವ್ರವಾಗಿ ನಡೆಯುತ್ತಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈಗಾಗಲೇ ಮಾಫಿ ಸಾಕ್ಷಿಯಗಿರುವ ಬಸವರಾಜ ಮುತ್ತಗಿ ಹೇಳಿಕೆ ದಾಖಲು ಮಾಡಿದ್ದಾನೆ. ಇದೇ ವೇಳೆ, ಮೃತ ಯೋಗೀಶ್ ಅವರ ಪತ್ನಿ ಮಲ್ಲಮ್ಮ ಅವರ ಸಾಕ್ಷ್ಯ ಹೇಳಿಕೆ ಬೇಡ ಎಂದು ಸಿಬಿಐ ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿರುವುದು ಕುತೂಹಲ ಕೆರಳಿಸಿದೆ.
- Narasimha Murti Pyati
- Updated on: Jan 7, 2025
- 10:47 am
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ, ಕನಕಲಕ್ಷ್ಮೀ ಬಂಧನ ಆಗಬೇಕು: ವಕೀಲರ ಸಂಘದ ಅಧ್ಯಕ್ಷ ವಿವೇಕ್ ಆಗ್ರಹ
Advocate Jeeva suicide case: ಭೋವಿ ನಿಗಮ ಅವ್ಯವಹಾರದ ಆರೋಪಿ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ವಕೀಲರ ಸಂಘದ ಅಧ್ಯಕ್ಷರು ಒತ್ತಾಯಿಸಿದ್ದಾರೆ. ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆನ್ನಲಾದ ಡಿವೈಎಸ್ಪಿ ಕನಕಲಕ್ಷ್ಮೀಯನ್ನು ಕೂಡಲೇ ಬಂಧಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಜೀವಾಳಿಗೆ ಚಿತ್ರ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎನ್ನುವ ಆರೋಪ ಇದೆ.
- Jagadisha B
- Updated on: Nov 27, 2024
- 8:22 pm
ಡಿಎ ಪ್ರಕರಣ: ವಿಚಾರಣೆಗೆ ಲೋಕಾಯುಕ್ತ ಅಧಿಕಾರಿಗಳ ಎದುರು ಹಾಜರಾದ ಡಿಕೆ ಶಿವಕುಮಾರ್
ಶಿವಕುಮಾರ್ ಅವರ ಡಿಎ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅದನ್ನೀಗ ಲೋಕಾಯುಕ್ತಗೆ ಟ್ರಾನ್ಸ್ಫರ್ ಮಾಡಿದೆಯೆಂದು ಖುದ್ದು ಡಿಸಿಎಂ ಹೇಳುತ್ತಾರೆ. ಹಾಗೆ ಮಾಡಲು ಅವಕಾಶವಿದೆಯೇ? ಎರಡೂ ಸ್ವಾಯತ್ತ ಸಂಸ್ಥೆಗಳಾದರೂ ಸಿಬಿಯ ಕೇಂದ್ರ ಸರ್ಕಾರದ ಅಡಿ ಬರುತ್ತದೆ.
- Arun Belly
- Updated on: Aug 22, 2024
- 7:16 pm
ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಬಾರದು: ಜಿ ಪರಮೇಶ್ವರ್
ವಾಲ್ಮೀಕಿ ನಿಗಮದ ಹಗರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಶಾಸಕ ಮತ್ತು ನಿಗಮ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಎಲ್ಲೂ ಓಡಿಹೋಗಿಲ್ಲ ತಮ್ಮ ಕುಟುಂಬದವರೊಂದಿಗೆ ಓಡಾಡಿಕೊಂಡಿದ್ದಾರೆ ಎಂದು ಹೇಳಿದ ಪರಮೇಶ್ವರ್ ದದ್ದಲ್ ಮತ್ತು ನಾಗೇಂದ್ರ ಇಬ್ಬರನ್ನೂ ಎಸ್ಐಟಿ ತನಿಖೆಗೊಳಪಡಿಸಿದೆ ಎಂದರು.
- Arun Belly
- Updated on: Jul 13, 2024
- 12:30 pm
ಮಾಜಿ ಸಚಿವ ಬಿ ನಾಗೇಂದ್ರ ಮನೆ ಮೇಲೆ ದಾಳಿ ನಡೆಸುವ ಅವಕಾಶ ಈಡಿಗೆ ಇಲ್ಲ: ಡಿಕೆ ಶಿವಕುಮಾರ್
ಬೆಂಗಳೂರು ನಗರದ ಬಿಜೆಪಿ ನಾಯಕ ಎನ್ ಆರ್ ರಮೇಶ್ ಜಾರಿ ನಿರ್ದೇನಾಲಯಕ್ಕೆ ದೂರು ನೀಡಿರುವುದನ್ನು ಶಿವಕುಮಾರ್ ಅವರಿಗೆ ಪತ್ರಕರ್ತರು ತಿಳಿಸಿದಾಗ, ಅವರ ದೂರನ್ನು ಮಾನ್ಯ ಮಾಡಲು ಸ್ವೀಕರಿಸಲು ಬರಲ್ಲ, ದೂರು ಸಲ್ಲಿಕೆಯಾಗಬೇಕಾದರೆ ಅದಕ್ಕೊಂದು ವ್ಯವಸ್ಥೆ ಇದೆ ಎಂದು ಹೇಳಿದರು.
- Arun Belly
- Updated on: Jul 11, 2024
- 12:45 pm