ಮಾತಿನ ಮಧ್ಯೆ ಯಡವಟ್ಟು: ಸ್ಪೀಕರ್ ಕ್ಷಮೆಯಾಚಿಸಿದ ಬಿಜೆಪಿ ಶಾಸಕ ಭರತ್ ಶೆಟ್ಟಿ
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಐ-ಪಾರ್ಕ್ ಯೋಜನೆ ಹಾಗೂ LEAP ಕಾರ್ಯಕ್ರಮದ ಕುರಿತು ಮಹತ್ವದ ಚರ್ಚೆ ನಡೆಯಿತು. ಭೂಮಿ ಮೌಲ್ಯದ ಶೇ.50 ಠೇವಣಿ, ಬ್ಯಾಂಕ್ ಸಾಲದ ಸಮಸ್ಯೆಗಳ ಕುರಿತು ಶಾಸಕರು ಕಳವಳ ವ್ಯಕ್ತಪಡಿಸಿದರು. ಮಂಗಳೂರು, ಮಣಿಪಾಲ್, ಉಡುಪಿ ಸೇರಿ ವಿವಿಧ ಪ್ರದೇಶಗಳಲ್ಲಿ ಹೂಡಿಕೆ ಉತ್ತೇಜಿಸುವ ಕಾರ್ಯಕ್ರಮದ ಬಗ್ಗೆ ಸಚಿವರು ಮಾಹಿತಿ ನೀಡಿದರು. ಚರ್ಚೆ ವೇಳೆ ಶಾಸಕ ಭರತ್ ಶೆಟ್ಟಿ ಬಾಯಿ ತಪ್ಪಿ ಸಭಾಧ್ಯಕ್ಷರ ಹೆಸರು ಹೇಳಿ ಕ್ಷಮೆಯಾಚಿಸಿದರು.
ಬೆಳಗಾವಿ, ಡಿಸೆಂಬರ್ 10: ವಿಧಾನ ಸಭೆಯಲ್ಲಿ ಐ-ಪಾರ್ಕ್ ಯೋಜನೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಭೂಮಿ ಮೌಲ್ಯದ ಶೇ.50 ಠೇವಣಿ ಕೇಳುವುದರಿಂದ ನಿರ್ಮಾಣ ಮಾಡುವವರಿಗೆ ಬ್ಯಾಂಕ್ ಸಾಲ ಸಿಗುವುದಿಲ್ಲ ಎಂದು ಶಾಸಕ ಭರತ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು. ಸರ್ಕಾರಿ ಆಸ್ತಿಗಳಲ್ಲಿ ಇಂತಹ ನಿಯಮಗಳು ಕಾರ್ಯಸಾಧ್ಯವಲ್ಲ, ಆದ್ದರಿಂದ ನೀತಿಯನ್ನು ಮರುಪರಿಶೀಲಿಸುವಂತೆ ಸಚಿವರಿಗೆ ಮನವಿ ಮಾಡಿದರು. ಚರ್ಚೆಯ ಸಂದರ್ಭದಲ್ಲಿ, ಭರತ್ ಶೆಟ್ಟಿ ಅವರು ಬಾಯಿ ತಪ್ಪಿ ಸಭಾಧ್ಯಕ್ಷರ ಬದಲಿಗೆ ಖಾದರ್ ಅವರೇ ಎಂದು ಸಂಬೋಧಿಸಿ ತಕ್ಷಣವೇ ಕ್ಷಮೆಯಾಚಿಸಿದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

