Gruhalakshmi Guarantee: ಸರ್ಕಾರ ರೂ. 2,000 ಕೊಡೋದಾದ್ರೆ ಅತ್ತೆಗೂ ಕೊಡಲಿ ಸೊಸೆಗೂ ಕೊಡಲಿ! ಬೆಳಗಾವಿ ಮಹಿಳೆಯರು
ಸೊಸೆಗಳ ಜೊತೆ ಜಗಳ ಮಾಡುತ್ತಾ ಕೂರಲಾಗದು, ಕೊಡೋದಾದರೆ ಇಬ್ಬರಿಗೂ ಕೊಡಲಿ ಅಂತ ಅತ್ತೆಗಳು ಹೇಳುತ್ತಿದ್ದಾರೆ.
ಬೆಳಗಾವಿ: ಕಾಂಗ್ರೆಸ್ ಘೋಷಿಸಿರುವ ಗೃಹಲಕ್ಷ್ಮಿ ಗ್ಯಾರಂಟಿ (Gruhalakshmi Scheme) ಅತ್ತೆ ಸೊಸೆಯರ ನಡುವೆ ಜಗಳಕ್ಕೆ ಮೂಲವಾಗಿದೆಯೇ? ದುಡ್ಡು ತನಗೆ ಸಲ್ಲಬೇಕು ಅಂತ ಅವರಿಬ್ಬರ ನಡುವೆ ವಾಗ್ವಾದ ನಡೆಯುತ್ತಿದೆಯೇ? ರಾಜ್ಯದ ಬೇರೆ ಭಾಗಗಳಲ್ಲಿ ಏನು ನಡೆದಿದೆ ಅಂತ ಗೊತ್ತಿಲ್ಲ ಆದರೆ, ಬೆಳಗಾವಿ ಗ್ರಾಮೀಣ (Belagavi Rural) ಕ್ಷೇತ್ರದ ನಿವಾಸಿಗಳಾಗಿರುವ ಈ ಮಹಿಳೆಯರು ಮಾತ್ರ ಹೌದು, ಈ ಯೋಜನೆ ಜಗಳಕ್ಕೆ ಕಾರಣವಾಗುತ್ತಿದೆ ಎನ್ನುತ್ತಿದ್ದಾರೆ. ತಮ್ಮ ಅತ್ತೆಗಳು ಮಾತ್ರ ವೋಟು (vote) ಹಾಕಿಲ್ಲ, ನಾವೂ ಹಾಕಿದ್ದೇವೆ ಅಂತ ಸೊಸೆಗಳು ಹೇಳಿದರೆ; ಅತ್ತೆಯಂದಿರು, ಸೊಸೆಗಳ ಜೊತೆ ಜಗಳ ಮಾಡುತ್ತಾ ಕೂರಲಾಗದು, ಕೊಡೋದಾದರೆ ಇಬ್ಬರಿಗೂ ಕೊಡಲಿ ಅನ್ನುತ್ತಿದ್ದಾರೆ. ಅವರ ಮಾತುಗಳನ್ನು ಕೇಳಿಸಿಕೊಂಡರೆ ನಿಮಗೆ ಸಮಸ್ಯೆ ಅರ್ಥವಾದೀತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos