ಕುದುರೆ ಏರಿ ಠಾಣೆಗೆ ಬಂದ ಬಳ್ಳಾರಿ ಸಿಪಿಐ; ವಿಡಿಯೋ ವೈರಲ್

Edited By:

Updated on: Dec 25, 2021 | 1:16 PM

ಕುದುರೆ ಸವಾರಿ ಕ್ರೇಜ್ ಇರುವ ಕಾರಣಕ್ಕೆ ಸವಾರಿ ಮಾಡಿದೆ ಅಂತ ಸಿಪಿಐ ಹೇಳಿದ್ದಾರೆ. ನಿನ್ನೆ ರಾತ್ರಿ ಖಾಕಿ ಡ್ರೆಸ್ ಮೇಲೆ ಕುದುರೆ ಸವಾರಿ ಮಾಡಿ, ಕುದುರೆ ಮೇಲೆಯೇ ಕೌಲ್ ಬಜಾರ್ ಸ್ಟೇಷನ್​ಗೆ ಆಗಮಿಸಿದ್ದಾರೆ.

ಬಳ್ಳಾರಿ: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ವೈರಲ್ ಆದ ವಿಡಿಯೋಗಳು ಅಸಹಜವಾಗಿರುತ್ತವೆ. ಇಂತಹದೊಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಳ್ಳಾರಿ ನರದದಲ್ಲಿ ಸಿಪಿಐ ಒಬ್ಬರು ಕುದುರೆ ಸವಾರಿ ಮಾಡಿದ್ದಾರೆ. ಬಳ್ಳಾರಿ ಕೌಲ್ ಬಜಾರ್ ಠಾಣೆಯ ಸಿಪಿಐ ಕುದುರೆ ಸವಾರಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಪಿಐ ಸುಭಾಷ್ ಎಂಬುವವರು ನಗರದಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಕುದುರೆ ಸವಾರಿ ಕ್ರೇಜ್ ಇರುವ ಕಾರಣಕ್ಕೆ ಸವಾರಿ ಮಾಡಿದೆ ಅಂತ ಸಿಪಿಐ ಹೇಳಿದ್ದಾರೆ. ನಿನ್ನೆ ರಾತ್ರಿ ಖಾಕಿ ಡ್ರೆಸ್ ಮೇಲೆ ಕುದುರೆ ಸವಾರಿ ಮಾಡಿ, ಕುದುರೆ ಮೇಲೆಯೇ ಕೌಲ್ ಬಜಾರ್ ಸ್ಟೇಷನ್​ಗೆ ಆಗಮಿಸಿದ್ದಾರೆ.

ಇದನ್ನೂ ಓದಿ

Viral Video: ಮನೆಯ ಗೇಟಿನೊಳಗೆ ನುಗ್ಗಿ ನಾಯಿಯನ್ನು ಎಳೆದೊಯ್ದ ಚಿರತೆ: ವೀಡಿಯೋ ವೈರಲ್​

Viral Video: ಕಿಟ್​ಕ್ಯಾಟ್​ ಚಾಕೋಲೇಟ್​ನಿಂದ ಟೊಮ್ಯಾಟೋ ಕಟ್​ ಮಾಡಿದ ಮಹರಾಯ; ಈ ವಿಡಿಯೋ ಮಿಸ್ ಮಾಡಬೇಡಿ!