‘ಬಳ್ಳಾರಿ ಜೈಲಿಗೆ ದರ್ಶನ್​ ಅಡ್ಜೆಸ್ಟ್​ ಆಗಲೇಬೇಕು’: ಎಸ್​.ಪಿ. ಶೋಭಾರಾಣಿ ಖಡಕ್​ ಮಾತು

Updated on: Aug 29, 2024 | 9:29 PM

ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೇಟ್​ಮೆಂಟ್​ ಪಡೆಯುತ್ತಿದ್ದ ದರ್ಶನ್​ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಆ ವಾತಾವರಣಕ್ಕೆ ಅವರು ಹೊಂದಿಕೊಳ್ಳಬೇಕು. ಆ ಕುರಿತು ಬಳ್ಳಾರಿ ಎಸ್​.ಪಿ. ಶೋಭಾರಾಣಿ ಅವರು ಮಾತನಾಡಿದ್ದಾರೆ. ಇಂದು (ಆಗಸ್ಟ್​ 29) ಜೈಲಿಗೆ ಭೇಟಿ ನೀಡಿದ್ದ ಶೋಭಾರಾಣಿ ಅವರು ಬಳಿಕ ಮಾಧ್ಯಮಗಳಿಗೆ ತಮ್ಮ ಹೇಳಿಕೆ ನೀಡಿದರು.

ಬೆಂಗಳೂರಿನ ವಾತಾವರಣಕ್ಕೂ ಬಳ್ಳಾರಿಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಬಳ್ಳಾರಿಗೆ ದರ್ಶನ್​ ಹೊಂದಿಕೊಳ್ಳಲೇಬೇಕು ಎಂದು ಬಳ್ಳಾರಿ ಎಸ್.ಪಿ. ಶೋಭಾರಾಣಿ ಹೇಳಿದ್ದಾರೆ. ಜೈಲಿಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಇಲ್ಲಿಗೆ ಬಂದಮೇಲೆ ಅಡ್ಜೆಸ್ಟ್​ ಆಗಲೇಬೇಕು. ನಾವು ಕೂಡ ಹೊರಗಡೆಯಿಂದ ಬಂದವರು’ ಎಂದು ಅವರು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 29, 2024 09:15 PM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More