ಮಡಿಕೇರಿ ಗೃಹ ಲಕ್ಷ್ಮಿ ಯೋಜನೆ ಲಾಭಾರ್ಥಿಗಳು ಆಧಾರ್ ಲಿಂಕ್ ಆಗಿದ್ದ ತಮ್ಮ ಬ್ಯಾಂಕ್ ಖಾತೆಯೊಂದಿಗೆ ವ್ಯವಹಾರವನ್ನೇ ಇಟ್ಟುಕೊಂಡಿರಲಿಲ್ಲ!

|

Updated on: Sep 05, 2023 | 7:27 PM

ಅವರ ಆಧಾರ್ ಕಾರ್ಡ್ ನಂಬರ್ ಕೂಡ ಐಡಿಬಿಐ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದ್ದರಿಂದ ಗೃಹ ಲಕ್ಷ್ಮಿ ಯೋಜನೆಯ ಹಣ ಅಲ್ಲೇ ಜಮಾ ಆಗಿದೆ. ಹಾಗಾಗೇ ನಿಷ್ಕ್ರಿಯಗೊಂಡಿದ್ದ ಖಾತೆಗಳನ್ನು ಸಕ್ರಿಯ ಮಾಡಿಸಲು ಮಹಿಳೆಯರು ಬ್ಯಾಂಕ್ ಮುಂದೆ ಸಾಲುಗಟ್ಟಿದ್ದಾರೆ. ಅವರಿಗೆ ಹಣವಂತೂ ಸಿಗುತ್ತೆ, ಆದರೆ ಕೊಂಚ ತಡವಾಗಲಿದೆ ಅಷ್ಟೇ

ಮಡಿಕೇರಿ: ಸರಕಾರಗಳ ಸ್ಕೀಮ್ ಗಳೇ ಹಾಗೆ ಮಾರಾಯ್ರೇ, ಲಾಭಾರ್ಥಿಯಾಗಲು (beneficiary) ಅರ್ಜಿ ಸಲ್ಲಿಸುವಾಗ ಜನರಿಂದ ಕೊಂಚ ಎಡವಟ್ಟಾದರೆ ಇಂಥ ಸ್ಥಿತಿ ನಿರ್ಮಾಣವಾಗುತ್ತದೆ. ಇದು ಮಡಿಕೇರಿ ನಗರದಲ್ಲಿ ಮಂಗಳವಾರ ಕಂಡ ದೃಶ್ಯ. ಅಸಲು ಸಂಗತಿಯೇನೆಂದರೆ, ಸಾಲಲ್ಲಿ ನಿಂತರುವ ಮಹಿಳೆಯರು ಸುಮಾರು 3 ವರ್ಷಗಳ ಹಿಂದೆ ನಗರದ ಐಡಿಬಿಐ ಬ್ಯಾಂಕ್ ಶಾಖೆಯಲ್ಲಿ (IDBI bank branch) ಖಾತೆ ಆರಂಭಿಸಿದ್ದಾರೆ. ಆದರೆ ಖಾತೆ ಓಪನ್ ಮಾಡಿದ ಬಳಿಕ ಅವರು ಬ್ಯಾಂಕ್ ನೊಂದಿಗೆ ಯಾವುದೇ ರೀತಿಯ ವ್ಯವಹಾರ (transaction) ನಡೆಸದ ಕಾರಣ ಎಲ್ಲರ ಖಾತೆಗಳು ನಿಷ್ಕ್ರಿಯಗೊಂಡಿವೆ. ಅವರ ಆಧಾರ್ ಕಾರ್ಡ್ ನಂಬರ್ (Aadhaar Card number) ಕೂಡ ಐಡಿಬಿಐ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದ್ದರಿಂದ ಗೃಹ ಲಕ್ಷ್ಮಿ ಯೋಜನೆಯ ಹಣ ಅಲ್ಲೇ ಜಮಾ ಆಗಿದೆ. ಹಾಗಾಗೇ ನಿಷ್ಕ್ರಿಯಗೊಂಡಿದ್ದ ಖಾತೆಗಳನ್ನು ಸಕ್ರಿಯ ಮಾಡಿಸಲು ಮಹಿಳೆಯರು ಬ್ಯಾಂಕ್ ಮುಂದೆ ಸಾಲುಗಟ್ಟಿದ್ದಾರೆ. ಅವರಿಗೆ ಹಣವಂತೂ ಸಿಗುತ್ತೆ, ಆದರೆ ಕೊಂಚ ತಡವಾಗಲಿದೆ ಅಷ್ಟೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಲ್ಲಿ ಕ್ಲಿಕ್ ಮಾಡಿ

Published On - 7:27 pm, Tue, 5 September 23

Follow us on