’13’ ಸಿನಿಮಾದಲ್ಲಿ ಯಾರು ನಾಯಕ? ರಾಘವೇಂದ್ರ ರಾಜ್ಕುಮಾರ್ ಹೇಳಿದ್ದು ಹೀಗೆ
Raghavendra Rajkumar: ರಾಘವೇಂದ್ರ ರಾಜ್ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ '13' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ನಟಿ ಶ್ರುತಿ, ಪ್ರಮೋದ್ ಶೆಟ್ಟಿ ಇನ್ನಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರಾಘವೇಂದ್ರ ರಾಜ್ಕುಮಾರ್, ಶ್ರುತಿ ನಟಿಸಿರುವ ’13’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಸುದ್ದಿಗೋಷ್ಠಿಗೆ ಆಗಮಿಸಿದ್ದ ನಟ ರಾಘವೇಂದ್ರ ರಾಜ್ಕುಮಾರ್ ಸಿನಿಮಾ ಬಗ್ಗೆ ಮಾತನಾಡುತ್ತಾ, ಈ ಸಿನಿಮಾದಲ್ಲಿ ನಾಯಕ-ನಾಯಕಿ ಎಂದೇನೂ ಇಲ್ಲ, ಸಿನಿಮಾದ ಕತೆ, ಚಿತ್ರಕತೆ, ಸಿನಿಮಾಕ್ಕೆ ನೀಡಿರುವ ಟ್ರೀಟ್ಮೆಂಟ್ ನಾಯಕ. ಸಿನಿಮಾವನ್ನು ಚೆನ್ನಾಗಿ ಮಾಡುವುದು ನಮ್ಮ ಕರ್ತವ್ಯವಾಗಿತ್ತು, ಅದನ್ನು ನಿಭಾಯಿಸಿದ್ದೇವೆ, ಇನ್ನುಳಿದಿದ್ದನ್ನು ಪ್ರೇಕ್ಷಕರು ಮಾಡುತ್ತಾರೆ. ಸಿನಿಮಾವನ್ನು ನೋಡಲು ಬೇಕಾದ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿವೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos