ಚಿನ್ನ ಸಾಗಿಸಲು ಖರ್ತನಾಕ್ ಐಡಿಯಾ ಮಾಡಿದ್ದರೂ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಖದೀಮ

| Updated By: ಆಯೇಷಾ ಬಾನು

Updated on: Oct 03, 2023 | 9:39 AM

ಕೊಲಂಬೋದಿಂದ ಶ್ರೀಲಂಕಾ ಏರ್​ಲೈನ್ಸ್​ನಲ್ಲಿ ಬಂದಿದ್ದ ಪ್ರಯಾಣಿಕ, ಚಿನ್ನವನ್ನು ಪೇಸ್ಟ್ ಮಾಡಿ ಪ್ಯಾಂಟ್ ಒಳಗಡೆ ಮರೆಮಾಚಿದ್ದ. ಖದೀಮನ ಕಳ್ಳಾಟ ಬಯಲಾಗಿದ್ದು ಅಧಿಕಾರಿಗಳು 74 ಗ್ರಾಂ ಚಿನ್ನ ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದೇವನಹಳ್ಳಿ, ಅ.03: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ಯಾಂಟ್, ಒಳ‌ ಉಡುಪಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನದ ಪುಡಿಯನ್ನು ಜಪ್ತಿ ಮಾಡಿದ್ದಾರೆ (Gold Smuggling). ಕೊಲಂಬೋದಿಂದ ಶ್ರೀಲಂಕಾ ಏರ್​ಲೈನ್ಸ್​ನಲ್ಲಿ ಬಂದಿದ್ದ ಪ್ರಯಾಣಿಕ, ಚಿನ್ನವನ್ನು ಪೇಸ್ಟ್ ಮಾಡಿ ಪ್ಯಾಂಟ್ ಒಳಗಡೆ ಮರೆಮಾಚಿದ್ದ. ಖದೀಮನ ಕಳ್ಳಾಟ ಬಯಲಾಗಿದ್ದು ಅಧಿಕಾರಿಗಳು 74 ಗ್ರಾಂ ಚಿನ್ನ ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ಲ್ಯಾಪ್​ಟಾಪ್, ಮೊಬೈಲ್​​ಗಳ ಜಪ್ತಿ

ಇನ್ನು ಇದೇ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ 7 ಪ್ರಯಾಣಿಕರಿಂದ 21 ಲ್ಯಾಪ್​ಟಾಪ್, ವಿವಿಧ ಬ್ರ್ಯಾಂಡ್​ಗಳ 75 ಮೊಬೈಲ್​ಗಳು​, 28 ವಿದೇಶಿ ಮದ್ಯದ ಬಾಟಲ್, 7 ಸಾವಿರ ವಿದೇಶಿ ಸಿಗರೇಟ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಶಾರ್ಜಾದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದ 7 ಪ್ರಯಾಣಿಕರು ವಿದೇಶದಿಂದ ಅಕ್ರಮವಾಗಿ ಲ್ಯಾಪ್​ಟಾಪ್, ಮೊಬೈಲ್​​ಗಳನ್ನು ಸಾಗಿಸುತ್ತಿದ್ದರು. ಸದ್ಯ ಈಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಯಾಣಿಕರು ಲಗೇಜ್ ಮತ್ತು ಹ್ಯಾಂಡ್​ ಬ್ಯಾಗ್​ನಲ್ಲಿ ಅಕ್ರಮವಾಗಿ ವಸ್ತುಗಳನ್ನು ತಂದಿದ್ದರು. ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಸಾಗಾಟ ಹಿನ್ನೆಲೆಯಲ್ಲಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ