ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ: ಕಣ್ಣೀರು ತರಿಸುತ್ತೆ ಈ ‘ಮೌನ ಹೋರಾಟಗಾರ’ನ ಕಥೆ!

Updated on: May 01, 2026 | 3:04 PM

ಬೆಂಗಳೂರಿನಲ್ಲಿ ಸ್ವಂತ ಮನೆ ಇಲ್ಲದೆ ಆಟೋ ಚಾಲಕರೊಬ್ಬರು ಆಟೋದಲ್ಲಿಯೇ ವಾಸಿಸುತ್ತಿದ್ದಾರೆ. ಇವರ ಪರಿಸ್ಥಿತಿ ಕಂಡ ಪ್ರಯಾಣಿಕರೊಬ್ಬರು ಸಹಾಯ ಮಾಡಲು ಮುಂದಾಗಿದ್ದಾರೆ. ನಗರದ ಐಷಾರಾಮಿ ಬದುಕಿನ ಮಧ್ಯೆ, ಈ ಚಾಲಕನ ಮೌನ ಹೋರಾಟ, ಕಠಿಣ ಪರಿಶ್ರಮ ಮತ್ತು ಘನತೆಯನ್ನು ಈ ಕಥೆ ಅನಾವರಣಗೊಳಿಸುತ್ತದೆ. ಮನೆ ಇಲ್ಲದಿದ್ದರೂ, ಆತ ಆಶಾವಾದ ಮತ್ತು ಭರವಸೆಯೊಂದಿಗೆ ಬದುಕುತ್ತಿದ್ದಾನೆ.

ಬೆಂಗಳೂರು, ಮೇ.1: ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಸ್ವಂತ ಮನೆ ಹೊಂದುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಅವಕಾಶಗಳ ಈ ನಗರದಲ್ಲಿ ಬದುಕಿಗಾಗಿ ಪ್ರತಿದಿನ ನಿಶ್ಶಬ್ದವಾಗಿ ಹೋರಾಡುವ ಅದೆಷ್ಟೋ ಜೀವಗಳಿವೆ. ಇದು ಅಂತಹದ್ದೇ ಒಬ್ಬ ಆಟೋ ಚಾಲಕನ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ಕಥೆ. ಆಟೋ ಓಡಿಸುವುದು ಈತನ ಜೀವನೋಪಾಯದ ದಾರಿ. ಆದರೆ ಹೊರಗಿನ ಜಗತ್ತಿಗೆ ಕಾಣದ ಸತ್ಯವೆಂದರೆ, ಈತನ ಪಾಲಿಗೆ ಆಟೋ ಕೇವಲ ವಾಹನವಲ್ಲ, ಅದುವೇ ಈತನ ಸೂರು. ತಲೆಮರೆಸಿಕೊಳ್ಳಲು ಸ್ವಂತ ಮನೆಯಿಲ್ಲದ ಕಾರಣ, ಈ ಚಾಲಕ ರಾತ್ರಿಯೆಲ್ಲಾ ತನ್ನ ಆಟೋದಲ್ಲಿಯೇ ಮಲಗುತ್ತಾನೆ. ಒಂದು ದಿನ ಪ್ರಯಾಣಿಕರೊಬ್ಬರು ಆತನ ಪರಿಸ್ಥಿತಿಯನ್ನು ಗಮನಿಸಿದರು. ಚಾಲಕನ ಮೊಬೈಲ್ ಬ್ಯಾಟರಿ ಕಡಿಮೆಯಿದ್ದಾಗ, ಆ ಮಹಿಳೆ ತನ್ನ ಮನೆಯ ಬಳಿ ಬಂದು ಫೋನ್ ಚಾರ್ಜ್ ಮಾಡುವಂತೆ ಆತನಿಗೆ ತಿಳಿಸಿದರು. ಆದರೆ ಆತ, “ಬೇಡ ಮೇಡಂ, ಅದು ತುಂಬಾ ಸಮಯ ತೆಗೆದುಕೊಳ್ಳುತ್ತದೆ” ಎಂದು ನಯವಾಗಿಯೇ ನಿರಾಕರಿಸಿದ. ಆ ವೇಳೆ ಮಹಿಳೆಯು, “ಸಂಪೂರ್ಣ ಪರದೆಗಳಿಲ್ಲದ ಈ ಆಟೋದಲ್ಲಿ ಮಳೆಯ ನಡುವೆ ಹೇಗೆ ಮಲಗುತ್ತೀರಿ?” ಎಂದು ಕೇಳಿದರು. ಅದಕ್ಕೆ ಆ ಚಾಲಕ ಸಮಾಧಾನದಿಂದಲೇ ಉತ್ತರಿಸಿದ, “ರಕ್ಷಣೆಗಾಗಿ ಮೆಟ್ರೋ ನಿಲ್ದಾಣದ ಬಳಿ ಆಟೋ ನಿಲ್ಲಿಸುತ್ತೇನೆ ಮೇಡಂ, ಫೋನ್ ಚಾರ್ಜ್ ಮಾಡಲು ಹತ್ತಿರದ ಅಂಗಡಿಯವರಿಗೆ ಕೊಡುತ್ತೇನೆ” ಎಂದು ಹೇಳಿದ, ನಗರದ ಒಂದು ಕಡೆ ಜನರು ಐಷಾರಾಮಿ ಬದುಕು ನಡೆಸುತ್ತಿದ್ದರೆ, ಇನ್ನೊಂದೆಡೆ ಇಂತಹ ಮೌನ ಹೋರಾಟಗಳು ನಡೆಯುತ್ತಿವೆ. ಕಷ್ಟಗಳಿದ್ದರೂ ಈ ಚಾಲಕ ತನ್ನ ಘನತೆ, ಕಠಿಣ ಪರಿಶ್ರಮ ಮತ್ತು ಭರವಸೆಯೊಂದಿಗೆ ಬದುಕುತ್ತಿದ್ದಾನೆ ಎಂದು @Karnataka Portfolio ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More