ಸಾರ್ವಜನಿಕರು ಕೈಯಲ್ಲಿ ಕೋಲು ಮತ್ತು ಖಾರದಪುಡಿ ಹಿಡಿದು ವಿಧಾನ ಸೌಧ ಪ್ರವೇಶಿಸುವ ದಿನ ದೂರವಿಲ್ಲ: ಆಟೋರಿಕ್ಷಾ ಡ್ರೈವರ್

| Updated By: preethi shettigar

Updated on: Nov 20, 2021 | 8:43 AM

ಬೆಂಗಳೂರಿನ ಶಾಸಕರು, ಸಂಸದರು, ಮಂತ್ರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ, ಆದರೂ ಅವರಿಗೆ ರಸ್ತೆಯನ್ನು ಸರಿಮಾಡಿಸಬೇಕೆನ್ನುವ ವಿವೇಚನೆ ಇಲ್ಲವೆಂದು ಮಹೇಂದ್ರ ಹೇಳುತ್ತಾರೆ. ಈ ರಸ್ತೆ ಮಾತ್ರವಲ್ಲ, ಬೆಂಗಳೂರಿನ ಎಲ್ಲ ರಸ್ತೆಗಳ ಸ್ಥಿತಿ ಹೀಗೆಯೇ ಇದೆ.

ಬೆಂಗಳೂರಿನ ಆಟೋರಿಕ್ಷಾ ಡ್ರೈವರ್ಗಳು ರೊಚ್ಚಿಗೆದ್ದಿದ್ದಾರೆ. ಅದಕ್ಕೆ ಕಾರಣ ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿದೆ. ಇದು ಬೆಂಗಳೂರು ಮಹಾನಗರದದ ಪ್ರಮುಖ ರಸ್ತೆಗಳಲ್ಲಿ ಒಂದು. ಹೇಗಿದೆ ನೋಡಿ ಅದರ ಸ್ಥಿತಿ! ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ರಸ್ತೆ ಬದಿಯ ಫುಟ್ಪಾತ್ ಮೇಲೆ ಅವರು ಬ್ಯಾಲೆನ್ಸ್ ಮಾಡುತ್ತಾ ನಡೆಯಬೇಕಿದೆ. ಆಯ ತಪ್ಪಿದರೆ ರಸ್ತೆ ಮೇಲಿನ ನೀರಿಗೆ ಬೀಳುತ್ತಾರೆ. ಆಟೋರಿಕ್ಷಾ ಡ್ರೈವರ್ ಆಗಿರುವ ಮಹೇಂದ್ರ ಅವರು ಬೆಳಗ್ಗೆಯಿಂದ 4 ಜನ ನೀರಿಗೆ ಬಿದ್ದಿರುವುದನ್ನು ನೋಡಿದ್ದಾರಂತೆ. ತಮ್ಮ ದುಡಿಮೆಗೆ ಹೋಗುವ ಬದಲು ಅವರು ನೀರಿಗೆ ಬಿದ್ದವರನ್ನು ಎತ್ತಿ ಮನೆಗೆ ಕಳಿಸುತ್ತಿದ್ದಾರಂತೆ.

ಬೆಂಗಳೂರಿನ ಶಾಸಕರು, ಸಂಸದರು, ಮಂತ್ರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ, ಆದರೂ ಅವರಿಗೆ ರಸ್ತೆಯನ್ನು ಸರಿಮಾಡಿಸಬೇಕೆನ್ನುವ ವಿವೇಚನೆ ಇಲ್ಲವೆಂದು ಮಹೇಂದ್ರ ಹೇಳುತ್ತಾರೆ. ಈ ರಸ್ತೆ ಮಾತ್ರವಲ್ಲ, ಬೆಂಗಳೂರಿನ ಎಲ್ಲ ರಸ್ತೆಗಳ ಸ್ಥಿತಿ ಹೀಗೆಯೇ ಇದೆ. ದಿನವಿಡೀ ಆಟೋ ಓಡಿಸಿ ಗಳಿಸಿದ್ದನ್ನು ಮರುದಿನ ಅದರ ರಿಪೇರಿಗೆ ಹಾಕುವಂಥ ಸ್ಥಿತಿ ನಮ್ಮದಾಗಿದೆ, ಈ ಸರ್ಕಾರಕ್ಕಂತೂ ಕಣ್ಣಿಲ್ಲ, ಕಿವೆಯಿಲ್ಲ, ಯಾರನ್ನು ಕೇಳುವುದು, ದೂರು-ದುಮ್ಮಾನ ಹೇಳಿಕೊಳ್ಳುವುದಾದರೂ ಯಾರಿಗೆ ಎಂದ ಮಹೇಂದ್ರ ಹೇಳುತ್ತಾರೆ.

ನಾವೊಂದು ಟೀ ಕುಡಿದರೆ, ಅಷ್ಟ್ಯಾಕೆ ಒಂದು ಬೀಡಿ ಸೇದಿದರೂ ಅದಕ್ಕೆ ತೆರಿಗೆ ಕಟ್ಟುತ್ತೇವೆ, ತೆರಿಗೆ ಹಣ ಸರ್ಕಾರ ವಸೂಲಿ ಮಾಡುವುದಾದರೆ ಜನರ ಯೋಗಕ್ಷೇಮ ನೋಡಿಕೊಳ್ಳುವುದು ಅದರ ಕರ್ತವ್ಯ. ರಸ್ತೆಗಳನ್ನು ಸರಿ ಮಾಡಿಸುವ ಯೋಗ್ಯತೆ ಸರ್ಕಾರಕ್ಕಿಲ್ಲವೇ? ಈ ರಸ್ತೆಗಳಲ್ಲಿ ಜನ ಬಿದ್ದು ಸಾಯ್ತಾ ಇದ್ದಾರೆ. ಅದಕ್ಕೆ ಯಾರು ಹೊಣೆ? ಎನ್ನುತ್ತಾರೆ ಮಹೇಂದ್ರ.

ಇದು ಹೀಗೆಯೇ ಮುಂದುವರಿದರೆ, ಸಾರ್ವಜನಿಕರು ಕೈಯಲ್ಲಿ ಖಾರದ ಪುಡಿ ಮತ್ತು ಕೋಲು ಹಿಡಿದುಕೊಂಡು ವಿಧಾನನ ಸೌಧದೊಳಗೆ ನುಗ್ಗಬೇಕಾಗುತ್ತದೆ. ಅ ದಿನ ದೂರವೇನೂ ಇಲ್ಲ ಅನಿಸುತ್ತಿದೆ ಎಂದ ಮಹೇಂದ್ರ ಎಚ್ಚರಿಸುತ್ತಾರೆ.

ಇದನ್ನೂ ಓದಿ:  ಪುನೀತ್ ನಿಧನದ ಬಗ್ಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್​ ಏನು? ಇಲ್ಲಿದೆ ವಿಡಿಯೋ