ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ ಹಾಕಿದ ಜಿಬಿಎ!

Updated on: Sep 16, 2026 | 9:14 AM

ಬೆಂಗಳೂರಿನ ಸುಬ್ಬಯ್ಯ ಸರ್ಕಲ್‌ನಲ್ಲಿ ಫುಟ್‌ಪಾತ್ ಮೇಲೆ ಕಟ್ಟಡ ನಿರ್ಮಾಣ ತ್ಯಾಜ್ಯ ಸಂಗ್ರಹಿಸಿದ್ದಕ್ಕೆ ಜಿಬಿಎ ಅಧಿಕಾರಿಗಳು 50,000 ರೂ. ದಂಡ ವಿಧಿಸಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ನಿಯಮ ಉಲ್ಲಂಘಿಸಿದ ಮಾಲೀಕ ಪ್ರಭುಗೆ ಈ ದಂಡ ಹೇರಲಾಗಿದೆ. ಈ ಹಿಂದೆ ತೆರವುಗೊಳಿಸಿದ್ದ ಫುಟ್‌ಪಾತ್ ಜಾಗದಲ್ಲೇ ತ್ಯಾಜ್ಯ ಸುರಿಯಲಾಗಿದ್ದು, ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 16: ನಗರದಲ್ಲಿ ಫುಟ್‌ಪಾತ್ ಮೇಲೆ ಕಟ್ಟಡ ನಿರ್ಮಾಣ ತ್ಯಾಜ್ಯ ಸಂಗ್ರಹಿಸಿದ್ದಕ್ಕಾಗಿ ಕಟ್ಟಡದ ಮಾಲೀಕನಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಅಧಿಕಾರಿಗಳು 50,000 ರೂ. ದಂಡ ವಿಧಿಸಿದ್ದಾರೆ. ಈ ಘಟನೆ ಬೆಂಗಳೂರಿನ ಸುಬ್ಬಯ್ಯ ಸರ್ಕಲ್‌ನಲ್ಲಿ ನಡೆದಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಈ ದಂಡವನ್ನು ಹೇರಲಾಗಿದೆ.

ಕಟ್ಟಡದ ಮಾಲೀಕ ಪ್ರಭು ಅವರು ಈ ನಿಯಮ ಉಲ್ಲಂಘನೆಗಾಗಿ ದಂಡ ತೆರಬೇಕಾಗಿದೆ. ಜಿಬಿಎ ಅಧಿಕಾರಿಗಳು ಈ ಹಿಂದೆ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದರು. ಆದರೆ, ತೆರವುಗೊಳಿಸಿದ್ದ ಇದೇ ಫುಟ್‌ಪಾತ್ ಜಾಗದಲ್ಲಿ ಮಾಲೀಕ ಪ್ರಭು ಅವರು ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ಸುರಿದಿದ್ದರು. ಪಾದಚಾರಿಗಳ ಸುರಕ್ಷತೆ ಮತ್ತು ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More