ವಿರೋಧದ ನಡುವೆಯೂ ಮದ್ವೆಯಾದ ಜೋಡಿ; ಸೊಸೆಗೆ ಅತ್ತೆ ಮಾವನಿಂದಲೇ ಕಿರುಕುಳ ಆರೋಪ
ವಿರೋಧದ ನಡುವೆಯೂ ಮದುವೆಯಾಗಿದ್ದಕ್ಕೆ ಸೊಸೆಗೆ ಅತ್ತೆ ಮಾವ ಕಿರುಕುಳ ನೀಡಿದಂತಹ ಆರೋಪವೊಂದು ಕೇಳಿ ಬಂದಿದೆ. ಮಾವನ ಜೊತೆ ಮಲಗುವಂತೆ ಸ್ವತಃ ಅತ್ತೆಯೇ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ತಾಯಿ ಹಾಗೂ ಮಲತಂದೆಯ ವಿರುದ್ಧ ಮಗ ಸೊಸೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 14: ವಿರೋಧದ ನಡುವೆಯೂ ಮದುವೆಯಾಗಿದ್ದಕ್ಕೆ ಅತ್ತೆ-ಮಾವ ಸೊಸೆಗೆ ಕಿರುಕುಳ (harassment allegation) ನೀಡಿದಂತ ಆರೋಪವೊಂದು ಕೇಳಿ ಬಂದಿದೆ. ಸ್ವತಃ ಅತ್ತೆಯೇ ಸೊಗೆಗೆ ಮಾವನ ಜೊತೆಗೆ ಮಲಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಯಾಸೀನ್ ಪಾಷಾ ಹಾಗೂ ಶಾಸೀಯಾ ಅವರ ಮದುವೆಯನ್ನು ಪೋಷಕರೇ ನಿಗದಿ ಮಾಡಿದ್ದರು. ಆದರೆ ನಂತರದಲ್ಲಿ ಈ ಮದುವೆಗೆ ಯಾಸೀನ್ ತಂದೆ-ತಾಯಿ ಹಿಂದೇಟು ಹಾಕಿದ್ದು, ಇವರ ವಿರೋಧದ ನಡುವೆಯೂ ಯಾಸೀನ್ ಶಾಸೀಯಾಳನ್ನು ಮದುವೆಯಾಗಿದ್ದಾನೆ. ಇದೇ ಕಾರಣದಿಂದಾಗಿ ನಮ್ಮ ಮೇಲೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ, ಸೊಸೆಗೆ ಅಸಭ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಮಗ-ಸೊಸೆ ತಾಯಿ ಹಾಗೂ ಮಲತಂದೆಯ ವಿರುದ್ಧ ಮಗ ಸೊಸೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 14, 2025 04:16 PM
