Video: ಕುಡಿದ ಅಮಲಿನಲ್ಲಿ ಪೊಲೀಸರನ್ನು ಎಳೆದಾಡಿದ ಯುವಕರು, ಐವರ ಮೇಲೆ ಬಿತ್ತು ಎಫ್​​​ಐಆರ್​​

Edited By:

Updated on: Dec 30, 2025 | 5:46 PM

ಬೆಂಗಳೂರಿನ ದೇವನಹಳ್ಳಿ ಬೈಪಾಸ್‌ನಲ್ಲಿ ಕರ್ತವ್ಯನಿರತ ಟ್ರಾಫಿಕ್ ಪೊಲೀಸರ ಮೇಲೆ ಮದ್ಯಪಾನ ಮಾಡಿ ದರ್ಪ ತೋರಿದ್ದ ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಡಿಡಿ ಚೆಕಿಂಗ್ ವೇಳೆ ಬ್ರೆತ್ ಅನಾಲೈಸರ್ ಪರೀಕ್ಷೆಗೆ ನಿರಾಕರಿಸಿ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕವಾಗಿ ಅವಮಾನಿಸಿದ ಆರೋಪದ ಮೇಲೆ ಎ1 ಕಿಶೋರ್, ಎ2 ಪ್ರತಾಪ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವನಹಳ್ಳಿ, ಡಿ.30: ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಮದ್ಯಪಾನದ ಅಮಲಿನಲ್ಲಿದ್ದ ಯುವಕರು ಅವಾಜ್ ಹಾಕಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಬೈಪಾಸ್​​​ನಲ್ಲಿ ನೆನ್ನೆ (ಡಿ.29) ರಾತ್ರಿ ನಡೆದಿದೆ. ಡಿಡಿ ಕೇಸ್ ಚೇಕಿಂಗ್ (ಮದ್ಯಪಾನ ಮಾಡಿ ವಾಹನ ಚಲಾಯಿಸುವುದು) ವೇಳೆ ಅವಾಜ್ ಹಾಕಿದ್ದ ಈ ಯುವಕರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕನನ್ನು ಬ್ರೆತ್ ಅನಾಲೈಸರ್​​ಗೆ ಊದಲು ಹೇಳಿದ್ದಾರೆ. ಆದರೆ ಇದಕ್ಕೆ ಚಾಲಕ ನಿರಾಕರಿಸಿದ್ದಾನೆ. ಈ ವಿಚಾರವಾಗಿ ಪೊಲೀಸರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾರಿನಿಂದ ಕೆಳಗಿಳಿದು ಟ್ರಾಫಿಕ್ ಪೊಲೀಸರ ಮೇಲೆ ದರ್ಪ ತೋರಿಸಿದ್ದಾನೆ. ಕಾರಿನಲ್ಲಿದ್ದ ಇತರರು ಕೂಡ ಪೊಲೀಸರನ್ನ‌ ಎಳೆದಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದನೆ‌ ಮಾಡಿದ್ದಾರೆ ಎಂದು ಹೇಳಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕವಾಗಿ ಅವಮಾನಿಸಿರುವ ಹಿನ್ನೆಲೆ‌ ಪ್ರಕರಣ ದಾಖಲಿಸಲಾಗಿದೆ. ಎ1 ಕಿಶೋರ್, ಎ2 ಪ್ರತಾಪ್, ಎ3 ರಘುನಂದನ್,ಎ4 ಕಾರ್ತಿಕ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಟ್ರಾಫಿಕ್ ಪೊಲೀಸರು ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ