ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಭದ್ರತಾ ಸಿದ್ಧತೆ: ಸಿಸಿಟಿವಿ ಕಣ್ಗಾವಲು
ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಮುಂಬರುವ ಹೊಸ ವರ್ಷದ ಆಚರಣೆಗಳಿಗಾಗಿ ಭದ್ರತಾ ಸಿದ್ಧತೆಗಳು ಆರಂಭಗೊಂಡಿವೆ. ಸಾರ್ವಜನಿಕರ ಸುರಕ್ಷತೆ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಿದ್ದಾರೆ. ಜನಸಂದಣಿ ನಿರ್ವಹಣೆ ಮತ್ತು ಸುಗಮ ಸಂಚಾರಕ್ಕೆ ಈ ಕ್ರಮಗಳು ಅತ್ಯಗತ್ಯ.
ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. 2025ಕ್ಕೆ ಗುಡ್ ಬೈ ಹೇಳಿ 2026ವೆಲ್ಕಂ ಮಾಡಲು ಜನ ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಪಾರ್ಟಿಗಾಗಿ ಭರ್ಜರಿ ಪ್ಲ್ಯಾನಿಂಗ್ನಲ್ಲಿ ತೊಡಗಿದ್ದಾರೆ. ನಗರದಲ್ಲಿ ವರ್ಷಾಚರಣೆ ನಡೆಯೋ ರಸ್ತೆಗಳಂತೂ ಜಗಮಗ ಅಂತಿವೆ. ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆಗಾಗಿ ಭದ್ರತಾ ಸಿದ್ಧತೆಗಳು ಆರಂಭಗೊಂಡಿವೆ. ಬ್ಯಾರಿಕೇಡ್ ಅಳವಡಿಕೆ, ಸಿಸಿ ಕ್ಯಾಮೆರಾ, ವಾಚ್ ಟವರ್ಗಳನ್ನು ಅಳವಡಿಕೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಣ್ಗಾವಲುವಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 30, 2025 06:45 PM

