ಬೆಂಗಳೂರು: ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು

Updated on: Aug 13, 2025 | 9:54 AM

ಶ್ರೀರಂಗಪಟ್ಟಣದಲ್ಲಿ ಖಾಸಗಿ ಶಾಲಾ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ರಾಮಮೂರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ​​ ನಡೆದಿದೆ. ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು-ನಾಲ್ಕು ತಿಂಗಳಿಂದ ಬಸ್‌ ನಿಲ್ಲಿಸಲಾಗಿತ್ತು. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು, ಆಗಸ್ಟ್ 13: ಶಾಲಾ ಬಸ್​ನಲ್ಲಿ ಬೆಂಕಿ (fire) ಹೊತ್ತಿಕೊಂಡು ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮಾಲೀಕ ಬಸ್​ ಮಾರಲು ತನ್ನ ಮನೆ ಪಕ್ಕದ ಜಾಗದಲ್ಲಿ ಸಮಾರು ಮೂರು ನಾಲ್ಕು ತಿಂಗಳಿಂದ ನಿಲ್ಲಿಸಿದ್ದರು. ಹೀಗಾಗಿ ಅದು ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಎಷ್ಟು‌ ಬಾರಿ ಬಸ್ ಡೋರ್ ಲಾಕ್ ಮಾಡಿದ್ದರು, ಹುಡುಗರು ಒಳಗೆ ಹೋಗಿ ಕೂರುತ್ತಿದ್ದರು. ಹೀಗಿರುವಾಗ ಅವರ ನಡುವೆಯೇ ಗಲಾಟೆ ಆಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸುಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸದ್ಯ ರಾಮಮೂರ್ತಿ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವರದಿ: ವಿಕಾಸ್ 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.