ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಶಕ್ತಿ ಯೋಜನೆಯಿಂದಾಗಿ ಸರಿಯಾಗಿ ಸಾರಿಗೆ ಬಸ್ ಗಳು ಸಂಚರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯ ಇದ್ದ ಕೆಲವು ಸಾರಿಗೆ ಬಸ್ ಗಳು ಡಕೋಟ ಆಗಿವೆ. ಎಲ್ಲೊಂದರಲ್ಲಿ ಬ್ರೇಕ್ ಫೇಲ್, ಚಕ್ರ ಕಳಚಿ ಬೀಳುವುದು ನಾನಾ ಪ್ರಾಬ್ಲಂಗಳು ಬಸ್ ಗಳಲ್ಲಿ ಕಂಡುಬರುತ್ತಿವೆ. ಈಗ ಹಾವೇರಿಯಲ್ಲಿ ಬಸ್ ವೊಂದರ ಮೇಲ್ಛಾವಣಿಯೇ ಸೋರುತ್ತಿರುವುದು ವಿಡಿಯೋ ವೈರಲ್ ಆಗಿದೆ.
ಹಾವೇರಿ, (ಆಗಸ್ಟ್ 12): ಶಕ್ತಿ ಯೋಜನೆಯಿಂದಾಗಿ ಸರಿಯಾಗಿ ಸಾರಿಗೆ ಬಸ್ ಗಳು ಸಂಚರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯ ಇದ್ದ ಕೆಲವು ಸಾರಿಗೆ ಬಸ್ ಗಳು ಡಕೋಟ ಆಗಿವೆ. ಎಲ್ಲೊಂದರಲ್ಲಿ ಬ್ರೇಕ್ ಫೇಲ್, ಚಕ್ರ ಕಳಚಿ ಬೀಳುವುದು ನಾನಾ ಪ್ರಾಬ್ಲಂಗಳು ಬಸ್ ಗಳಲ್ಲಿ ಕಂಡುಬರುತ್ತಿವೆ. ಈಗ ಹಾವೇರಿಯಲ್ಲಿ ಬಸ್ ವೊಂದರ ಮೇಲ್ಛಾವಣಿಯೇ ಸೋರುತ್ತಿರುವುದು ವಿಡಿಯೋ ವೈರಲ್ ಆಗಿದೆ. KA 25, F 2909 ನಂಬರಿನ ಹಾವೇರಿಯಿಂದ ಮೇಲ್ಮರಿಗೆ ತೆರಳುತ್ತಿದ್ದ ಬಸ್ ಮೇಲ್ಛಾವಣಿ ಸೋರಿಕೆಯಾಗಿದ್ದು, ಮಳೆ ನೀರಿನಿಂದ ಬಚಾವ್ ಆಗಲು ಪ್ರಯಾಣಿಕರು ಬಸ್ ನಲ್ಲೇ ಛತ್ರಿ ಹಿಡಿದುಕೊಂಡು ಕುಳಿತುಕೊಂಡಿದ್ದಾರೆ. ಛತ್ರಿ ಇಲ್ಲದವರು ಮಳೆ ನೀರು ಸಿಡಿಸಿಕೊಳ್ಳುತ್ತ ಬಸ್ ನ ದುಸ್ಥಿತಿಗೆ ಹಿಡಿಶಾಪ ಹಾಕುತ್ತ ಪ್ರಯಾಣಿಸಿದ್ದಾರೆ.
Latest Videos

