ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ

Updated on: Jul 01, 2026 | 4:56 PM

ಮುಖ್ಯಾಂಶಗಳು

  • ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
  • ಕಣೀರು ಹಾಕಿದ ಬೀದಿ ಬದಿ ವ್ಯಾಪಾರಿ ಅಜ್ಜಿ
  • ಅಧಿಕಾರಿಗಳ ವಿರುದ್ಧ ಹಿಡಿಶಾಪ

ಬೆಂಗಳೂರಿನಲ್ಲಿ ನಡೆಯುತ್ತಿರುವ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯು ಬೀದಿ ಬದಿ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ ಬದುಕು ನಿರ್ವಹಣೆಗೆ ಏಕೈಕ ಆಸರೆಯಾಗಿದ್ದ ವ್ಯಾಪಾರವನ್ನು ಕಳೆದುಕೊಂಡ ವೃದ್ಧ ವ್ಯಾಪಾರಿಯೊಬ್ಬರು ಗೋಳಾಡಿದ್ದಾರೆ. ಈ ವ್ಯಾಪಾರವನ್ನು ಕಳೆದುಕೊಂಡರೆ ಕುಟುಂಬವನ್ನು ಹೇಗೆ ಸಲಹಬೇಕು ಎಂದು ಕಿಡಿಕಾರಿದ್ದಾರೆ.

ಬೆಂಗಳೂರು, ಜುಲೈ 01: ನಗರದಲ್ಲಿ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯ ಈ ತೆರವು ಕಾರ್ಯಾಚರಣೆಯು ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ ದಿ ಬದಿ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದ ಹಲವು ಕುಟುಂಬಗಳು ಕಂಗಾಲಾಗಿವೆ. ತೆರವು ಹಿನ್ನೆಲೆ ಓರ್ವ ವೃದ್ಧ ಮಹಿಳೆ ಗೋಳಾಡಿದ್ದಾರೆ. ‘ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ನಮಗೆ ಯಾರು ಇಲ್ಲ. ನಾನು ಈ ಕೆಲಸ ಮಾಡಿ ಮೊಮ್ಮಕ್ಕಳನ್ನು ಬೆಳಸುತ್ತಿದ್ದೇನೆ. ತನ್ನ ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಬೇರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಈ ವ್ಯಾಪಾರವನ್ನು ಕಳೆದುಕೊಂಡರೆ ಕುಟುಂಬವನ್ನು ಹೇಗೆ ಸಲಹಬೇಕು’ ಎಂದು ವ್ಯಾಪರಿ ಅಜ್ಜಿ ಕಣೀರು ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us