ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ: ನಿಖಿಲ್​​ ಯುವತಿಯರ ಜತೆಗೆ ಖುಲ್ಲಂ ಖುಲ್ಲಾ

Updated on: Feb 28, 2026 | 3:10 PM

ಬೆಂಗಳೂರು ಕಾಲೇಜು ಯುವತಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಡಿಯೋ ಬಹಿರಂಗವಾಗಿದೆ. ಅಮೃತಹಳ್ಳಿ ವಿಲ್ಲಾ ಪಾರ್ಟಿಯಲ್ಲಿ ಆರೋಪಿ ಡಿಕ್ಸನ್ ಮತ್ತು ಸಂತ್ರಸ್ತೆಯ ಉಪಸ್ಥಿತಿಯನ್ನು ವೈರಲ್ ವಿಡಿಯೋ ತೋರಿಸುತ್ತದೆ. ಪಾರ್ಟಿಯ ನಂತರ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಯುವತಿಯರನ್ನು ಪುಸಲಾಯಿಸಿ, ಕುಡಿಸಿ ಅತ್ಯಾಚಾರ ಮಾಡುವ ಮಾದರಿ ಬೆಳಕಿಗೆ ಬಂದಿದ್ದು, ಓರ್ವ ಆರೋಪಿ ಅನಿರುದ್ಧ ಬಂಧನಕ್ಕೊಳಗಾಗಿದ್ದಾನೆ.

ಬೆಂಗಳೂರು, ಫೆ.28: ಬೆಂಗಳೂರು ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ವಿಡಿಯೋವೊಂದು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಹುಡುಗಿಯರ ಜತೆಗೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್​​ ಆಗಿದೆ. ವಿಲ್ಲಾ ಪಾರ್ಟಿಯ ಎಕ್ಸ್ಕ್ಲೂಸಿವ್ ದೃಶ್ಯ ಲಭ್ಯವಾಗಿದೆ. ಅಮೃತಹಳ್ಳಿ ವಿಲ್ಲಾ ಪಾರ್ಟಿಯಲ್ಲಿ ಆರೋಪಿ ಡಿಕ್ಸನ್ ಸಂತ್ರಸ್ತೆ ಇದ್ದ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಜೊತೆ ಜೋರಾಗಿ ಮ್ಯೂಸಿಕ್ ಹಾಕಿ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಐವರು ಯುವತಿಯರು ಹಾಗೂ ಆರೋಪಿಗಳು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಈ ಪಾರ್ಟಿಯ ನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಯುವತಿಯರನ್ನ ಪುಸಲಾಯಿಸಿ ಅವರ ಜೊತೆಗೆ ಸ್ನೇಹ ಬೆಳೆಸುದು ನಂತರದಲ್ಲಿ ಅವರನ್ನ ಕರ್ಕೊಂಡು ಬರೋದು ಕುಡಿಸಿ, ಅತ್ಯಾಚಾರ ಮಾಡುವುದು ಎಂದು ಹೇಳಿದ್ದಾರೆ. ಇನ್ನು ಈ ಪಾರ್ಟಿಯಲ್ಲಿ ಎಂಟು ಮಂದಿ ಭಾಗಿಯಾಗಿದ್ರು ಐದು ಮಂದಿ ಹುಡುಗಿಯರು ಮೂವರು ಹುಡುಗರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅನಿರುದ್ಧ ಇದೀಗ ಪೊಲೀಸರ ವಶದಲ್ಲಿ ಇದ್ದಾನೆ. ಈತ ದಾವಣಗೆರೆಯಲ್ಲಿ ಕಾಂಟ್ರಾಕ್ಟರ್ ಕೆಲಸವನ್ನ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More