ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಮನೆ ಕೆಲಸಗಾರ
ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳ ಸಾವಿಗೆ ಆಕೆಯ ಗಂಡನ ಕುಟುಂಬವೇ ಕಾರಣ. ಆತ ಗಂಡಸೇ ಅಲ್ಲ ಎಂದು ದೂರಿದ್ದ ಗಾನವಿ ಕುಟುಂಬದ ವಿರುದ್ಧವೇ ಈಗ ಎಫ್ಐಆರ್ ದಾಖಲಾಗಿದೆ. ತನ್ನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೂಡ ಕೇಳಿಬಂದಿದ್ದ ಕಾರಣ ಮನನೊಂದಿದ್ದ ಗಾನವಿ ಪತಿ ಸೂರಜ್ ಕೂಡ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಜೊತೆ ಆತನ ತಾಯಿ ಜಯಂತಿಯೂ ಸೂಸೈಡ್ ಯತ್ನ ಮಾಡಿದ್ದರು. ಇಷ್ಟೆಲ್ಲ ರಾದ್ಧಾಂತಕ್ಕೆ ಗಾನವಿ ಲವ್ ಸ್ಟೋರಿಯೇ ಕಾರಣ ಎಂಬ ಹೊಸ ಆರೋಪ ಈಗ ಕೇಳಿಬಂದಿದೆ.
ಬೆಂಗಳೂರು, (ಡಿಸೆಂಬರ್ 28): ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳ ಸಾವಿಗೆ ಆಕೆಯ ಗಂಡನ ಕುಟುಂಬವೇ ಕಾರಣ. ಆತ ಗಂಡಸೇ ಅಲ್ಲ ಎಂದು ದೂರಿದ್ದ ಗಾನವಿ ಕುಟುಂಬದ ವಿರುದ್ಧವೇ ಈಗ ಎಫ್ಐಆರ್ ದಾಖಲಾಗಿದೆ. ತನ್ನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೂಡ ಕೇಳಿಬಂದಿದ್ದ ಕಾರಣ ಮನನೊಂದಿದ್ದ ಗಾನವಿ ಪತಿ ಸೂರಜ್ ಕೂಡ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಜೊತೆ ಆತನ ತಾಯಿ ಜಯಂತಿಯೂ ಸೂಸೈಡ್ ಯತ್ನ ಮಾಡಿದ್ದರು. ಇಷ್ಟೆಲ್ಲ ರಾದ್ಧಾಂತಕ್ಕೆ ಗಾನವಿ ಲವ್ ಸ್ಟೋರಿಯೇ ಕಾರಣ ಎಂಬ ಹೊಸ ಆರೋಪ ಈಗ ಕೇಳಿಬಂದಿದೆ.
ಇನ್ನು ಮೃತ ಸೂರಜ್ ತೋಟದ ಕೆಲಸಗಾರ ವೆಂಕಟಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಯಾವುದೇ ಕೆಟ್ಟ ಅಭ್ಯಾಸ ಅವರಿಗೆ
ಇರ್ಲಿಲ್ಲ. ಅವರ ಮದುವೆಗೆ ನಮಗೆಲ್ಲ ಬಟ್ಟೆ ಕೊಟ್ಟು ಕರೆದಿದ್ದರು. ಶ್ರೀಲಂಕಾಗೆ ಹೋದಾಗ ನಾನು ಅವರಿಗೆ ಕರೆ ಮಾಡಿದ್ದೆ. ನಾನು ಶ್ರೀಲಂಕಾದಲ್ಲಿ ಇದ್ದೀನಿ,ನಿವು ಕಾಲ್ ಮಾಡಿದ್ರೆ ಜಾಸ್ತಿ ಕರೆನ್ಸಿ ಕಾಲಿ ಆಗುತ್ತೆ. ನಾನು ಬೆಂಗಳೂರಿಗೆ ಬಂದು ಕರೆ ಮಾಡುತ್ತೇನೆ ಎಂದಿದ್ದರು. ಅವರ ಪತ್ನಿ ಜೊತೆ ತೋಟಕ್ಕೆ ಬರ್ತಿನಿ ಎಂದು ಹೇಳಿದ್ದರು. ಈಗ ಆವರು ಇಲ್ಲ. ನಮ್ಮನ್ನು ನೋಡಿಕೊಳ್ಳೋರು ಯಾರು ಇಲ್ಲ. ನಾವು ಕೆಲಸ ಬಿಟ್ಟು ಮನೆಗೆ ವಾಪಸ್ ಹೋಗುತ್ತೇನೆ ಎಂದು ಬೇಸರ ಹೊರಹಾಕಿದರು.
