AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾನವಿ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಆತ್ಮಹತ್ಯೆಗೆ ಕಾರಣ ಸೂರಜ್​​ ಅಲ್ಲ; ಮತ್ಯಾರು?

ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವರದಕ್ಷಿಣೆ ಕಿರುಕುಳ ಆರೋಪಕ್ಕೆ ಮನನೊಂದ ಪತಿ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾನವಿ ಹಿಂದಿನ ಪ್ರೀತಿ ಕಥೆಯೇ ಈ ರಾದ್ಧಾಂತಕ್ಕೆ ಕಾರಣ ಎಂಬ ಆರೋಪ ಈಗ ಕೇಳಿಬಂದಿದೆ. ಸೂರಜ್ ಕುಟುಂಬದವರು ಗಾನವಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು ಎಂದು ದೂರಿದ್ದು, ಆಕೆಯ ಕುಟುಂಬದ ಆರೋಪ ಸುಳ್ಳು ಎಂದು ಎಫ್‌ಐಆರ್ ದಾಖಲಿಸಿದ್ದಾರೆ.

ಗಾನವಿ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಆತ್ಮಹತ್ಯೆಗೆ ಕಾರಣ ಸೂರಜ್​​ ಅಲ್ಲ; ಮತ್ಯಾರು?
ಗಾನವಿ-ಸೂರಜ್​​
ಪ್ರಸನ್ನ ಹೆಗಡೆ
|

Updated on:Dec 28, 2025 | 1:12 PM

Share

ಬೆಂಗಳೂರು, ಡಿಸೆಂಬರ್​​ 28: ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳ ಸಾವಿಗೆ ಆಕೆಯ ಗಂಡನ ಕುಟುಂಬವೇ ಕಾರಣ. ಆತ ಗಂಡಸೇ ಅಲ್ಲ ಎಂದು ದೂರಿದ್ದ ಗಾನವಿ ಕುಟುಂಬದ ವಿರುದ್ಧವೇ ಈಗ ಎಫ್​​ಐಆರ್​​ ದಾಖಲಾಗಿದೆ. ತನ್ನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೂಡ ಕೇಳಿಬಂದಿದ್ದ ಕಾರಣ ಮನನೊಂದಿದ್ದ ಗಾನವಿ ಪತಿ ಸೂರಜ್​​ ಕೂಡ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಜೊತೆ ಆತನ ತಾಯಿ ಜಯಂತಿಯೂ ಸೂಸೈಡ್​​ ಯತ್ನ ಮಾಡಿದ್ದರು. ಇಷ್ಟೆಲ್ಲ ರಾದ್ಧಾಂತಕ್ಕೆ ಗಾನವಿ ಲವ್​​ ಸ್ಟೋರಿಯೇ ಕಾರಣ ಎಂಬ ಹೊಸ ಆರೋಪ ಈಗ ಕೇಳಿಬಂದಿದೆ.

ಹೌದು, ಮೃತ ಗಾನವಿ ಮೇಲೆಯೇ ಸೂರಜ್​​ ಕುಟುಂಬಸ್ಥರು ಈಗ ಹೊಸ ಆರೋಪ ಮಾಡಿದ್ದಾರೆ. ಗಾನವಿ ಈ ಹಿಂದೆ ಹರ್ಷಾ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ್ಬೇಕು ಎಂದು ನಿರ್ಧರಿಸಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್​​ನ ಮದುವೆಯಾಗಿದ್ದಾಳೆ. ಶ್ರೀಲಂಕಾಗೆ ಹನಿಮೂನ್​​ಗೆ ಹೋದಾಗ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್​​ಗೆ ತಿಳಿಸಿದ್ದಳು. ಈ ವಿಚಾರ ಕೇಳಿ ಆತ ಶಾಕ್​​ ಆಗಿದ್ದ. ಹೀಗಾಗಿಯೇ ಹನಿಮೂನ್​​ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ಗಾನವಿಯನ್ನ ತಮ್ಮ ಮನೆಗೆ ಅವರ ಕುಟುಂಬಸ್ಥರು ಕರೆದೊಯ್ದಿದ್ದು, ಡಿಸೆಂಬರ್​​ 24ರಂದು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ಬಳಿಕ ಸೂರಜ್​​ ಮೇಲೆ ಆಕೆಯ ತಾಯಿ ರುಕ್ಮಿಣಿ ಕಿರುಕುಳ ಆರೋಪ ಹೊರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ನವವಿವಾಹಿತೆ ದುರಂತ ಸಾವು; ಹನಿಮೂನ್​​ನಲ್ಲಿ ಆಗಿದ್ದೇನು?

ಫ್ಯಾಮಿಲಿ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಾದ ಬಳಿಕ ಮಹಾರಾಷ್ಟ್ರಕ್ಕೆ ಸೂರಜ್ ಮತ್ತು ಆತನ ತಾಯಿ ಜಯಂತಿ ತೆರಳಿದ್ದರು. ಆರೋಪದಿಂದ ನೊಂದಿದ್ದ ಸೂರಜ್​​ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸೂರಜ್​​ ಭಾವ ರಾಜ್​​ಕುಮಾರ್​​ ವಿದ್ಯಾರಣ್ಯಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದು, ಗಾನವಿ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ, ರಾಧಾ, ಬಾಬುಗೌಡ, ಸತೀಶ್ ಕಾರಣ ಎಂದು ದೂರಿದ್ದಾರೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:05 pm, Sun, 28 December 25

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ