ಬೆಂಗಳೂರಲ್ಲಿ ಅನಧಿಕೃತ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಫಕೀರ್ ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಲಾಗಿದೆ. ಜಿಬಿಎಗೆ ಮಂಜೂರಾಗಿದ್ದ 14 ಎಕರೆ ಜಾಗದಲ್ಲಿ ಒತ್ತುವರಿ ನಡೆದಿತ್ತು. ಯಾವುದೇ ಮಾಹಿತಿ ನೀಡದೆ ಮನೆಗಳನ್ನು ತೆರವುಗೊಳಿಸಲಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಡಿಸೆಂಬರ್ 20: ನಗರದಲ್ಲಿ ಅನಧಿಕೃತ ನಿವೇಶನಗಳ ವಿರುದ್ಧ ಜಿಬಿಎ ಸಮರ ಸಾರಿದೆ. ಇಂದು ಬೆಳ್ಳಂಬೆಳಗ್ಗೆ ಶ್ರೀನಿವಾಸಪುರದ ಕೋಗಿಲು ಲೇಔಟ್‌ನಲ್ಲಿ 200 ಹೆಚ್ಚು ಮನೆಗಳ ತೆರವು ಕಾರ್ಯ ಮಾಡಲಾಗಿತು. 14 ಎಕರೆ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 190ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಲಾಗಿದೆ. ಜಿಬಿಎ ಕಾರ್ಯಕ್ಕೆ ಸೂರು ಕಳೆದುಕೊಂಡವರು ಹಿಡಿಶಾಪ ಹಾಕಿದ್ದಾರೆ. ಒಂದೇ ಒಂದೂ ಸೂಚನೆ ಕೊಡದೇ ಕೆಡವಿದ್ದಾರೆ ಅಂತಾ ಕೆಂಡಕಾರದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
