ಕನ್ನಡಿಗರೇ ನಿರ್ಮಿಸಿದ ದ್ರುವ ಹೆಲಿಕಾಪ್ಟರ್ ಹಸ್ತಾಂತರ:ಭಾರತೀಯ ಸೇನೆಗೆ ಮತ್ತಷ್ಟು ಬಲ

Edited By:

Updated on: Sep 18, 2026 | 10:51 PM

ಬೆಂಗಳೂರಿನ ಹೆಚ್​​ಎಎಲ್​ನಲ್ಲಿ ತಯಾರಿಸಲಾಗಿರೋ ಲಘು ಯುದ್ಧ ವಿಮಾನ, ಹೆಲಿಕಾಪ್ಟರ್​ಗಳನ್ನು ಸೇನೆಗೆ ಹಸ್ತಾಂತರ ಮಾಡಲಾಯ್ತು. ಹೆಚ್​ಎಎಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ರುವ್ NG ಹೆಲಿಕಾಪ್ಟರ್, HTT-40 ಲಘು ಯುದ್ಧ ವಿಮಾನ, ಎರಡು ತೇಜಸ್ ತರಬೇತಿ ಲಘು ಯುದ್ಧ ವಿಮಾನಗಳು, ನಾಲ್ಕು NG ಧ್ರುವ್ ಯುದ್ಧ ಹೆಲಿಕಾಪ್ಟರ್​​ಗಳನ್ನು ಹಸ್ತಾಂತರಿಸಲಾಯ್ತು. ಇದರೊಂದಿಗೆ ಭಾರತೀಯ ಸೇನೆಗೆ ಮತ್ತಷ್ಟು ಬಲ ಬಂದಿದೆ.

ಬೆಂಗಳೂರು, (ಸೆಪ್ಟೆಂಬರ್ 18): ಬೆಂಗಳೂರಿನ ಹೆಚ್​​ಎಎಲ್​ನಲ್ಲಿ ತಯಾರಿಸಲಾಗಿರೋ ಲಘು ಯುದ್ಧ ವಿಮಾನ, ಹೆಲಿಕಾಪ್ಟರ್​ಗಳನ್ನು ಸೇನೆಗೆ ಹಸ್ತಾಂತರ ಮಾಡಲಾಯ್ತು. ಹೆಚ್​ಎಎಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ರುವ್ NG ಹೆಲಿಕಾಪ್ಟರ್, HTT-40 ಲಘು ಯುದ್ಧ ವಿಮಾನ, ಎರಡು ತೇಜಸ್ ತರಬೇತಿ ಲಘು ಯುದ್ಧ ವಿಮಾನಗಳು, ನಾಲ್ಕು NG ಧ್ರುವ್ ಯುದ್ಧ ಹೆಲಿಕಾಪ್ಟರ್​​ಗಳನ್ನು ಹಸ್ತಾಂತರಿಸಲಾಯ್ತು. ಹೌದು…ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ HTT-40ಯ ಸ್ವದೇಶಿ ಆಗಿ ನಿರ್ಮಾಣ ಮಾಡಿದೆ. ಅದರ ಮೊದಲ ವಿಮಾನ ಇವತ್ತು ಭಾರತೀಯ ವಾಯುಪಡೆಗೆ ಹಸ್ತಾಂತರ ಕೂಡಾ ಮಾಡಲಾಗಿದೆ.

ಸೇನೆಗೆ ಹಸ್ತಾಂತರಗೊಂಡ ಯುದ್ಧ ವಿಮಾನಗಳು, ಹೆಲಿಕಾಪ್ಟರ್​ಗಳ ವಿಶೇಷತೆಗಳೇನು ಎನ್ನುವುದನ್ನು ನೋಡೋದಾದ್ರೆ, CA ತೇಜಸ್ ಭಾರತದಲ್ಲಿ ತಯಾರಾದ ಅತ್ಯಂತ ಆಧುನಿಕ ಲಘು ಯುದ್ಧ ವಿಮಾನವಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಜಂಟಿಯಾಗಿ ತಯಾರಿಸಿದೆ. ಗಂಟೆಗೆ ಸುಮಾರು 2,205 ಕಿ.ಮೀ ವೇಗದಲ್ಲಿ ಹಾರುತ್ತೆ. ಇದು GE F404-IN20 ಎಂಜಿನ್ ಹೊಂದಿದೆ. HTT-40 ಅಂದ್ರೆ ಹಿಂದೂಸ್ತಾನ್ ಟರ್ಬೋ ಟ್ರೈನರ್-40 HAL ನಿರ್ಮಾಣ ಮಾಡಿರುವ ಮೂಲ ತರಬೇತಿ ವಿಮಾನವಾಗಿದೆ. ಇದು ಅಮೆರಿಕದ ಹನಿವೆಲ್ ಸಂಸ್ಥೆಯ Honeywell TPE331-12B ಟರ್ಬೋಕ್ರಾಪ್ ಎಂಜಿನ್ ಹೊಂದಿದೆ. ಇದರಲ್ಲಿ ಇಬ್ಬರು ಪೈಲಟ್‌ಗಳು ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಗಂಟೆಗೆ 450 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ವಾಯುಪಡೆಯು ಒಟ್ಟು 70 HTT-40 ವಿಮಾನಗಳಿಗಾಗಿ ₹6,838 ಕೋಟಿ ಮೌಲ್ಯದ ಒಪ್ಪಂದವನ್ನು ಮಾಡಿಕೊಂಡಿದೆ.

Loading...
Unable to load recommendations.
Follow Us