ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

Updated on: May 29, 2026 | 7:48 PM

ಬೆಂಗಳೂರಿನ ಶಿವಾನಂದ ಸರ್ಕಲ್ ಅಂಡರ್‌ಪಾಸ್ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿದೆ. ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ ಕಾರಣ ಒಂದು ಕಾರು ಸಿಲುಕಿಕೊಂಡಿದ್ದು, ಚಾಲಕ ಕಾರನ್ನು ಹೊರತೆಗೆಯಲು ಹರಸಾಹಸಪಟ್ಟರು. ಮಳೆ ಕೊಂಚ ಕಡಿಮೆಯಾಗಿದ್ದರೂ, ನೀರು ಇಳಿಯುವವರೆಗೆ ವಾಹನ ಸಂಚಾರ ಅಸಾಧ್ಯವಾಗಿದೆ. ಕಾರಿನಲ್ಲಿ ಚಾಲಕನೊಂದಿಗೆ ಮೂವರು ಪ್ರಯಾಣಿಕರು ಇದ್ದರು.

ಬೆಂಗಳೂರು, ಮೇ 29: ಕೇವಲ ಅರ್ಧ ಗಂಟೆ ಸುರಿದ ಮಳೆಗೆ ನಗರದ ಹಲವೆಡೆ ರಸ್ತೆಗಳು ಕೆರೆಯಂತಾಗಿವೆ. ಶಿವಾನಂದ ವೃತ್ತದ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತಿವೆ. ಈ ವೇಳೆ ಕಾರು ಒಂದು ಅಂಡರ್​ಪಾಸ್​ನಲ್ಲಿ ಸಿಲುಕಿಕೊಂಡಿದೆ. ಕಾರು ತೆಗೆಯಲು ಚಾಲಕ ಪರದಾಡಿದ್ದಾರೆ. ಇನ್ನು ಯುಬಿ ಸಿಟಿ ಮುಂದಿನ ರಸ್ತೆಯಲ್ಲಿ 2 ಅಡಿಯಷ್ಟು ನೀರು ನಿಂತಿದೆ. ನೀರು ನುಗಿದ್ದ ಪರಿಣಾಮ ಬೈಕ್ ಕೈಕೊಟ್ಟಿದ್ದು, ಫುಡ್ ಡೆಲಿವರಿ ಬಾಯ್ ಪರದಾಡಿದ್ದಾರೆ. ಇನ್ನು ರಿಚ್ಮಂಡ್ ವೃತ್ತ, ಶಾಂತಿನಗರದಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಕೆ.ಆರ್.ಪುರಂನಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆಗೆ ಜನರ ಪರದಾಡಿದರು. ಮಹಾಲಕ್ಷ್ಮೀ ಲೇಔಟ್, ಯಶವಂತಪುರದಲ್ಲಿ ರಸ್ತೆ ಮೇಲೆ ನೀರು ನಿಂತಿದೆ. ಇನ್ನು ಇತ್ತ ಕೋರಮಂಗಲದ ಸೋನಿ ಸಿಗ್ನಲ್, ಕನ್ನಿಂಗ್​ಹ್ಯಾಮ್ ರಸ್ತೆಗಳು ಹೊಳೆಯಂತಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us