ಬೆಂಗಳೂರಲ್ಲಿ ನಿರ್ಮಿಸಿದ್ದ ದೇಶದ ಪ್ರಥಮ ರ್ಯಾಪಿಡ್ ರಸ್ತೆ ಉದ್ಘಾಟನೆಗೊಂಡ ಒಂದೇ ತಿಂಗಳಿಗೆ ಬಿರುಕು
ಮುಖ್ಯಮಂತ್ರಿಯವರು ಉದ್ಘಾಟಿಸಿದ ಒಂದೇ ತಿಂಗಳಿಗೆ ದೇಶದ ಪ್ರಥಮ ಱಪಿಡ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಾಣಗೊಂಡಿದ್ದ ಱಪಿಡ್ ರಸ್ತೆ ಇದಾಗಿದೆ.
ಬೆಂಗಳೂರು: ಉದ್ಘಾಟನೆಗೊಂಡ ಒಂದೇ ತಿಂಗಳಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರ್ಯಾಪಿಡ್ ರಸ್ತೆಯಲ್ಲಿ (Bengaluru rapid road) ಬಿರುಕು ಕಾಣಿಸಿಕೊಂಡಿದೆ. ಬಿಬಿಎಂಪಿಯು ಬೆಂಗಳೂರಿನ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಿದ ರ್ಯಾಪಿಡ್ ರಸ್ತೆ ಇದಾಗಿದ್ದು, ದೇಶದ ಪ್ರಥಮ ರ್ಯಾಪಿಡ್ ರಸ್ತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಳಪೆ ಕಾಮಗಾರಿಯಿಂದ ರ್ಯಾಪಿಡ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ದೇಶದ ಪ್ರಥಮ ರ್ಯಾಪಿಡ್ ರಸ್ತೆ ಅಂತ ಬಿಬಿಂಸಿದ್ದ ಬಿಬಿಎಂಪಿ (BBMP), ಬೆಂಗಳೂರಿನಲ್ಲಿ ಇದೇ ಮಾದರಿಯ ರಸ್ತೆ ನಿರ್ಮಿಸಲು ನಿರ್ಧರಿಸಿತ್ತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 07, 2023 12:53 PM