Tumakuru: ಮಟ್ಕಾ ದಂಧೆಗೆ ಕಡಿವಾಣ ಹಾಕಿದ ಐಪಿಎಸ್ ಅಧಿಕಾರಿಗೆ ಅದ್ದೂರಿ ಸ್ವಾಗತ ಕೋರಿದ ಪಾವಗಡ ಜನತೆ

Tumakuru: ಮಟ್ಕಾ ದಂಧೆಗೆ ಕಡಿವಾಣ ಹಾಕಿದ ಐಪಿಎಸ್ ಅಧಿಕಾರಿಗೆ ಅದ್ದೂರಿ ಸ್ವಾಗತ ಕೋರಿದ ಪಾವಗಡ ಜನತೆ

TV9 Web
| Updated By: Rakesh Nayak Manchi

Updated on: Jan 07, 2023 | 11:31 AM

ಮಟ್ಕಾ ದಂಧೆಗೆ ಕಡಿವಾಣ ಹಾಕಿದ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರಿಗೆ ಪಾವಗಡ ಜನತೆ ಹೃದಯಸ್ಪರ್ಶಿ ಸ್ವಾಗತ ಕೋರಿದರು.

ತುಮಕೂರು: ಮಟ್ಕಾ ದಂಧೆ (Matka racket)ಗೆ ಕಡಿವಾಣ ಹಾಕಿದ ಐಪಿಎಸ್ ಅಧಿಕಾರಿ ಚಂದ್ರಶೇಖರ್ (IPS Chandrashekhar) ಅವರಿಗೆ ಜಿಲ್ಲೆಯ ಪಾವಗಡ ಜನರು ಹೃದಯಸ್ಪರ್ಶಿ ಸ್ವಾಗತ ಕೋರಿದರು. ಬೆಂಗಳೂರಿನ ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದಾರೆ. ಪಾವಗಡ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಹೆಚ್ಚಾಗಿದ್ದ ಮಟ್ಕಾ ದಂಧೆ ನಡೆಯುತ್ತಿತ್ತು. ಹಲವು ವರ್ಷಗಳಿಂದ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಅಸಾಧ್ಯವಾಗಿತ್ತು. ಈ ಹಿಂದೆ ಕೇಂದ್ರ ವಲಯ ಐಜಿಪಿಯಾಗಿದ್ದ ಚಂದ್ರಶೇಖರ್, ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ್ದರು. ಚಂದ್ರಶೇಖರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಪಾವಗಡ ತಾಲೂಕಿನ ಜನತೆ, ನಿನ್ನೆ ಸಂಜೆ ಪಾವಗಡಕ್ಕೆ ಆಗಮಿಸಿದ್ದ ವೇಳೆ ಪಾವಗಡ ನಾಗರೀಕ ವೇದಿಕೆ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಚಂದ್ರಶೇಖರ್ ಅವರಿಗೆ ಅದ್ದೂರಿ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದರು. ನಂತರ ಚಂದ್ರಶೇಖರ್ ಅವರು ಪಾವಗಡ ಶನಿಮಹಾತ್ಮ ದೇವಾಸ್ಥಾನಕ್ಕೆ ಪೂಜೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ